ಮನೆ ಅಪರಾಧ ಯುವಕನ ಕೈಗೆ ಮಗು ಕೊಟ್ಟು ಮಹಿಳೆ ಪರಾರಿ ಪ್ರಕರಣ: ಇಬ್ಬರ ಬಂಧನ

ಯುವಕನ ಕೈಗೆ ಮಗು ಕೊಟ್ಟು ಮಹಿಳೆ ಪರಾರಿ ಪ್ರಕರಣ: ಇಬ್ಬರ ಬಂಧನ

0

ಮೈಸೂರು(Mysuru): ಕಳೆದ 15 ದಿನಗಳ ಹಿಂದೆ ರಾಯಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಹೆಚ್.ಡಿ. ಕೋಟೆಯ ಯುವಕ ರಘು ಕೈಗೆ ಗಂಡು ಮಗು ಕೊಟ್ಟು ಪರಾರಿ ಆಗಿದ್ದ ಘಟನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಅಪರಿಚಿತ ಮಹಿಳೆ  ನೀಡಿದ ಆ ಮಗುವನ್ನು ಯುವಕ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ, ಪೊಲೀಸರಿಗೊಪ್ಪಿಸಿದ್ದ. ಬಳಿಕ ಪೊಲೀಸರು ಮಗುವನ್ನ ಪುನರ್ವಸತಿ ಕೇಂದ್ರದಲ್ಲಿ ಬಿಟ್ಟಿದ್ದರು.

ತನಿಖೆ ಕೈಗೊಂಡಾಗ ಪೊಲೀಸರಿಗೆ ಆ ಮಗು ತಂದುಕೊಟ್ಟಿದ್ದ ರಘು ಹಾಗೂ ಆ ಮಗುವಿನ ತಾಯಿಯ ನಿಜವಾದ ಸಂಬಂಧ ಗೊತ್ತಾಗಿದೆ. ಮಗುವಿನ ತಾಯಿಗೆ ರಘು ಇನ್​​​ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಆತನಿಗೆ ರಾಯಚೂರಿನ ಮಹಿಳೆಯೊಂದಿಗೆ ಒಡನಾಟ ಇತ್ತು. ಇದು ಮಹಿಳೆಯ ಗಂಡನಿಗೂ ಕೂಡ ಗೊತ್ತಾಗಿತ್ತು. ಅವರ ಪ್ರೀತಿಗೆ ಅಡ್ಡಿಯಾಗುವ ಈ ಮಗುವನ್ನು ದೂರ ಮಾಡುವ ಪ್ಲ್ಯಾನ್​​ ಮಾಡಿ, ರಾಯಚೂರಿನ ಬಸ್ ಸ್ಟ್ಯಾಂಡ್​ನಲ್ಲಿ ಅಪರಿಚಿತ ಮಹಿಳೆ ಮಗುವನ್ನು ಕೊಟ್ಟು ಹೋದಳು ಎಂಬ ಕಥೆ ಕಟ್ಟಿದ್ದ.

ಇದರಿಂದ ಅನುಮಾನಗೊಂಡ ಲಷ್ಕರ್ ಪೊಲೀಸರು ಮಗುವಿನ ತಂದೆಯನ್ನ ಪತ್ತೆ ಮಾಡಿ ವಿಚಾರಿಸಿದಾಗ ಇವರಿಬ್ಬರ ಸಂಬಂಧ ಹಾಗೂ ಡ್ರಾಮಾ ಗೊತ್ತಾಗಿದೆ. ಇಬ್ಬರನ್ನ ಬಂಧಿಸಿರುವ ಲಷ್ಕರ್ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ. ಹೀಗೆ ಅಕ್ರಮ ಸಂಬಂಧಕ್ಕೆ ರಾಯಚೂರಿನ ಮಹಿಳೆ ಹಾಗೂ ಹೆಚ್.ಡಿ.ಕೋಟೆ ಮೂಲದ ರಘು ಆಡಿದ ನಾಟಕವನ್ನು ಪೊಲೀಸರು ಬಯಲು ಮಾಡಿದ್ದಾರೆ.