ಮನೆ ಅಪರಾಧ ಬೀದರ್: ಲಾರಿ-ಕಾರಿನಲ್ಲಿ ಸಾಗಿಸುತ್ತಿದ್ದ 3.05 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

ಬೀದರ್: ಲಾರಿ-ಕಾರಿನಲ್ಲಿ ಸಾಗಿಸುತ್ತಿದ್ದ 3.05 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

0

ಬೀದರ್: ಹೈದರಾಬಾದ್ ನಿಂದ‌‌ ಮುಂಬೈನಿಂದ‌ ಕಡೆಗೆ ಲಾರಿ ‌ಮತ್ತು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3.05 ಕೋಟಿ ರೂ. ವೆಚ್ಚದ 305 ಕೆ.ಜಿ ಗಾಂಜಾವನ್ನು ಜಿಲ್ಲಾ ಪೊಲೀಸರು ಜಪ್ತಿ‌ ಮಾಡಿದ್ದಾರೆ. ಮಧ್ಯರಾತ್ರಿ ನಡೆದ ಘಟನೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

Join Our Whatsapp Group

ಖಚಿತ ಮಾಹಿತಿ ಮೇರೆಗೆ ಗಾಂಧಿ ಗಂಜ್ ಠಾಣೆಯ ಸಿಪಿಐ ಹಣಮರೆಡ್ಡಪ್ಪ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ, ಲಾರಿ‌ ಮತ್ತು ಕಾರಿನಲ್ಲಿ ಸಾಗಿಸುತ್ತಿದ್ದ 3.05 ಕೋಟಿ‌ ವೆಚ್ಚದ ಗಾಂಜಾ ಜಪ್ತಿ ಮಾಡಿದ್ದಾರೆ.

8 ಲಕ್ಷ ರೂ. ಮೌಲ್ಯದ ಲಾರಿ ಮತ್ತು 6 ಲಕ್ಷ ಮೊತ್ತದ ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ.