ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಒಬ್ಬ ಕಳ್ಳನಿಗೆ ನ್ಯಾಯಾಧೀಶರು ಒಂದು ವರ್ಷ ಜೈಲಿನ ಸಜೆಯನ್ನು ಘೋಷಿಸುತ್ತಿದ್ದಂತೆಯೇ ಕಳ್ಳ ನ್ಯಾಯಾಧೀಶರನ್ನು ಕೇಳಿಕೊಂಡ ”ಈ ಸಜೆಯನ್ನು ನನ್ನ ವಕೀಲರಿಗೆ ಕೊಡಬೇಕು. ನನಗಲ್ಲ ನ್ಯಾಯಾಧೀಶ ಕೇಳಿದ “ಏಕೇ”  ಕಳ್ಳ ಹೇಳಿದ “ನಾನು ಕಳವು ಮಾಡಿದ ಪೂರ್ಣ ಹಣವನ್ನು ವಕೀಲರಿಗೇ  ಕೊಟ್ಟಿರುವೆ. ”

***

    ಇಬ್ಬರಿಗೂ ಕುಡುಕರು ದಾರಿಯಲ್ಲಿ ಜಗಳವಾಡುತ್ತಿದ್ದರು.ಅಲ್ಲಿ ಕಾಣುವುದು ಸೂರ್ಯ ಎಂದು ಒಬ್ಬನೆಂದರೆ ಇನ್ನೊಬ್ಬ ಚಂದ್ರ ಎನ್ನುತ್ತಿದ್ದ. ಅಷ್ಟ್ರಲ್ಲಿ ಒಬ್ಬ ದಾರಿಹೋಕ ಅಲ್ಲಿಗೆ ಬಂದ, ಅವರು ಅವನನ್ನು ಕೇಳಿದರು ಅಲ್ಲಿ ಕಾಣುವುದು ಸೂರ್ಯನೋ ಚಂದ್ರಾನೋ?ಸ್ಥಿತಿ ನೋಡಿ ದಾರಿಹೋಕ ಹೇಳಿದ “-ನನಗೆ ಗೊತ್ತಿಲ್ಲ. ನಾನು ಇವರಿಗೆ ಹೊಸಬ ”

***

   ಅಪ್ಪ : ರಾತ್ರಿ ಕಾರನ್ನು ತೆಗೆದುಕೊಂಡು ಎಲ್ಲಿಗೆ ಹೋಗಿದ್ದಿಯೋ.?

 ಮಗ : ನನ್ನ ಜೊತೆ ಹುಡುಗರನ್ನು ಕರೆದುಕೊಂಡು ಒಂದು ಸುತ್ತು ತಿರುಗಿಸಿಕೊಂಡು ಬಂದೆ.

 ಅಪ್ಪ : ನೋಡು ಆ  ಹುಡುಗರು ಕಾರಿನಲ್ಲಿ ಹೇರ್ ಪಿನ್ ಹಾಗೂ ಲಿಪ್ಸ್ ಸ್ಟಿಕ್ ಬಿಟ್ಟು ಹೋಗಿದ್ದಾರೆ.