ಮೇಷ್ಟರು ಕಿಟ್ಟಿಗೆ ಶಾಲೆಯಲ್ಲಿ ಪ್ರಶ್ನೆ ಕೇಳಿಯೇ ಕೇಳಿದರು. ಅವನು ಯಾವುದಕ್ಕೂ ಸರಿಯಾದ ಉತ್ತರ ಹೇಳಲಿಲ್ಲ.ಸಿಟ್ಟು ಬಂದು ಮೇಷ್ಟರು ನಿನ್ನ ತಲೆಯಲ್ಲಿ ಬರಿ ಶಗಣಿ ತುಂಬಿದೆ ಎನ್ನುತ್ತಿದ್ದಂತೆ ಕಿಟ್ಟಿ ಹೇಳಿದ. ಅದಕ್ಕೆ ದಿನಾ ನೀವು ನನ್ನ ತಲೆ ತಿಂತೀರಿ ಎಂದು!
“ಬೆಕ್ಕು ಅಡ್ಡ ಹೋದರೆ ಹೋದ ಕೆಲಸ ಆಗೋಲ್ಲ ದುರದೃಷ್ಟ ಅಂತಾರೆ,ನೀನು ಇದನ್ನು ನಂಬುತ್ತೀಯಾ?” “ಅದು ನಿನ್ನ ಮನುಷ್ಯನೋ ಇಲೀನೋ ಅನ್ನೋದು ಅವಲಂಬಿಸಿರುತ್ತದೆ”
ವಿದ್ಯಾರ್ಥಿ 1: “ಪ್ರಿನ್ಸಿಪಾಲರು ಕಾಲೇಜಿನಲ್ಲಿ ಸಿಗರೇಟ್ ಸೇದೋದನ್ನು ನಿಲ್ಲಿಸೋ ಹಾಗೆ ಮಾಡ್ತೀನಿ ಅಂದಿದ್ದಾರೆ.”
ವಿದ್ಯಾರ್ಥಿ 2 : “ಅಯ್ಯೋ! ಅವರು ನಮ್ಮನ್ನು ಕಾಲೇಜಿಗೆ ಬರೋದೆ ನಿಲ್ಲಿಸು ಅಂತಲೂ ಹೇಳಬಹುದು.”