ತನಂ ತನಂ ತನಂ ತನಂ ತಂದಾನ ತಾನಾನ
ಶರಣಂ ಶರಣಂ ಎನ್ನುತ ಕೇಳಿದೆ ಭಕ್ತರ ಸವಿಗಾನ
ಅಶಿತಂ ಮಧುರಂ ವದನಂ ಮಧುರಂ ಅಯ್ಯಪ್ಪ ನಿಜರೂಪ
ನಯನಂ ಮಧುರಂ ಕಮಲಂ ಮಧುರಂ
ಸಾವಿರ ಜೊತೆ ದೀಪ ||
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ || 4 ||
ಜನ್ಮ ಜನ್ಮದ ಪಾಪದ ಭಾರವೆ ದೇಹವು ಬಾಗಿಹುದು
ಮಾಡಿದ ಪಾಪದ ತಾಪವ ತಾಳದೆ ಜೀವವು ಬಿಂದಿಹುದು ||
ಪ್ರೇಮ ಸಾಗರನೆ ಬೆಂದಿಹಾ ಮನಸ್ಸು ನಿನ್ನನೆ ನಂಬಿರುವುದು
ಪಾಪವ ನೀಗಿಸುವ ತಾಪವ ತೀರಿಸುವ ಎನ್ನುತ್ತಾ ಬೇಡಿಹುದು
|| ತನಂ ತನಂ ||
ಪುಟ್ಟ ಭಯಂಕರ ಇತ್ತ ಸುಖಂಕರ ಸ್ವಾಮಿ ಅಯ್ಯಪ್ಪ
ಪಾಪವಿನಾಶಕ ತಾಪ ನಿವಾರಕ ದೇವ ನಮ್ಮಪ್ಪ
ವರಶುಭ ಗಾತ್ರ ನೀರಜ ನೇತ್ರ ಪ್ರಭುವೇ
ಅಯ್ಯಪ್ಪ ಸ್ವಾಮಿ ತಂದೆ ನಮ್ಮಪ್ಪ
ಹರಿಹರ ಪುತ್ರ ಪರಮ ಪವಿತ್ರ ಸ್ವಾಮಿ ಅಯ್ಯಪ್ಪ ||
|| ತನಂ ತನಂ||