ಗಣೇಶ ಚೌತಿಯ ಶುಭದಿನವಿಂದು ಜಯ ಜಯ ಗಣನಾಥ ||
ಪ್ರಾಣ ಪ್ರತಿಷ್ಠೆಯ ಮಾಡುತ್ತ ನಿನ್ನನ್ನು ||
ಪೂಜಿತೆ ನಾನು ಸದಾ|| ಗಣೇಶ ||
ಬಿಲಪತ್ರೆ ಗರಿಕೆ ಹಲಬಗೆ ಹೂಗಳ ಅರ್ಪಿಸಿ ನಿನ್ನ ಪೂಜಿಸುವೆ ||
ಉಮೇಶಪಾರ್ವತಿ ಕುಮಾರ ಅಷ್ಟೋತ್ತರ
ನಾಮಜಪ ನಾ ಮಾಡುವೆ ||ಗಣೇಶ||
ಯಾವುದೇ ಕಾರ್ಯಆರಂಭದಲು
ಬಹುತರ ಕಷ್ಟವು ವಿಘ್ನವು ಬರಲು||
ಎಲ್ಲರು ಮಾಡುವ ಪೂಜೆ ಇದೇ
ನೋವನ್ನು ತೀರೋ ಮಾರ್ಗವಿದೆ ||ಗಣೇಶ ||