ಮನೆ ಅಪರಾಧ ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಅಂಗಡಿಯೊಳಗೆ ನುಗ್ಗಿದ ಕಾರು

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಅಂಗಡಿಯೊಳಗೆ ನುಗ್ಗಿದ ಕಾರು

0

ವಿಟ್ಲ: ಕಾರೊಂದು ಚಾಲಕನ ನಿಯಂತ್ರಣ ಕಳೆದು ಅಂಗಡಿ ಮೇಲೆ ಅಪ್ಪಳಿಸಿದ ಪರಿಣಾಮ ಒಬ್ಬ ಗಾಯಗೊಂಡು, ಅಂಗಡಿ ಸಂಪೂರ್ಣವಾಗಿ ಧ್ವಂಸಗೊಂಡ ಘಟನೆ ವಿಟ್ಲ-ಕಾಸರಗೋಡು ರಸ್ತೆಯ ಕಾಶಿಮಠ ಎಂಬಲ್ಲಿ ಆ.16ರ ಶುಕ್ರವಾರ ನಡೆದಿದೆ.

Join Our Whatsapp Group

ಉಕ್ಕುಡ ಕಡೆಯಿಂದ ಬಂದ ಇಕೋ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಯೋಗೀಶ ಕಾಶಿಮಠ ಅವರಿಗೆ ಸೇರಿದ ಅಂಗಡಿಗೆ ಅಪ್ಪಳಿಸಿ, ಒಳಗೆ ಜಖಂಗೊಂಡು ನಿಂತಿದೆ.

ಈ ಪರಿಣಾಮ ಅಂಗಡಿ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಅಂಗಡಿಯಲ್ಲಿದ್ದ ಬೆಲೆ ಬಾಳುವ ವಸ್ತುಗಳು ಹಾನಿಗೊಂಡಿದೆ. ಕಾರು ಚಾಲಕ ಕಂಠಪೂರ್ತಿ ಮದ್ಯ ಕುಡಿದು ಕಾರು ಚಲಾಯಿಸಿದ ಪರಿಣಾಮ ಕಾರು ರಸ್ತೆಯಿಂದ ನೇರವಾಗಿ ಬದಿಗೆ ಸರಿದು, ನಿಯಂತ್ರಣ ತಪ್ಪಿ, ಅಂಗಡಿ ಮೇಲೇರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.