ಮನೆ ದೇವರ ನಾಮ  ಹೂವಿನಲು ನೀನಿರುವೆ

 ಹೂವಿನಲು ನೀನಿರುವೆ

0

 ಹೂವಿನಲ್ಲಿ ನೀನಿರುವೆ ಅಯ್ಯಪ್ಪ ದೇವ

 ಆ ಹೂವಿನ ಗಂಧದೆ ನಿನ್ನಯ ಪ್ರೀತಿಯ ಅರಿತೆ ನಾನು ದೇವ||

 ಹೂವಿನಲ್ಲೂ ನೀನಿರುವೆ ಅಯ್ಯಪ್ಪ ದೇವ |

 ತಂಗಾಳಿ ತಂಪಲಿ ಕಂಡೆ ನಿನ್ನ ಅಂದ|

 ಮುಂಜಾನೆಯ ರಂಗೀನಲ್ಲಿ ಕಂಡೆ ನಿನ್ನ ಚೆಂದ|

 ಹಕ್ಕಿಗಳ ಇನಿಯ ಸ್ವರದಲ್ಲಿ ಕಂಡೆ ನಿನ್ನ ನಾಮ |

 ಪಂಪ ನದಿಯಲ್ಲಿ ನಿಂದ ವೇಳೆ ನಾ |

 ಕಂಡೆ ನಾ ಸ್ವಾಮಿ ನಿನ್ನ ಪ್ರೇಮ ||ಹೂವಿನಲು ||

 ಶಬರಿ ಗಿರಿಯ ಧನ್ಯವು  ಅಲ್ಲಿ ನಿನ್ನ ನಿಲ್ಲಲು |

 ನಿನ್ನ ನಾಮದ ಹಾಡುವ ಹಾಕ್ಕಿಯು ಮಾಡಿದೇನಿತು ಪುಣ್ಯವು |

 ನಿನ್ನ ಪಾದ ಪೂಜೆಗೆ ಬಂದ ಹೂವಃ ಕೂಡ ಧನ್ಯವು |

 ನಿನ್ನ ಮೈಯಿಗೆ ಲೇಪನವಾಗಿ

 ಸಾರ್ಥಕವಾಯಿತು ಚಂದನವು ||ಹೂವಿನಲು ||