ಗಂಡ ಹೆಂಡತಿ ಜೋರು ಜಗಳ ಮಾಡಿದರು. ಹೆಂಡತಿ ಬಾಯಿ ಬಹಳ. ಗಂಡ ಅಂದ,ನೀನು ಇತ್ತೀಚೆಗೆ ನಾಯಿಗೆ ಅಂದಂತೆ ಅನ್ನುತ್ತಿ ಎಂದು ಎಂದು. ಹೆಂಡತಿ ಜೋರಿನಿಂದ ಅಂದಳು, ಸುಮ್ಮನೆ ಏನಾದರೂ ಬೊಗಳಬೇಡಿ!
***
ಒಬ್ಬ ತೆಂಗಿನ ಮರ ಹತ್ತಿದ. ಓ ಇಲ್ಲಿಂದ ಇಂಜಿನಿಯರಿಂಗ್ ಕಾಲೇಜು ಕಾಣುತ್ತಿದೆ. ಹುಡುಗಿಯರೆಲ್ಲಾ ಕಾಣುತ್ತಾರೆ ಎಂದ. ಕೆಳಗಿದ್ದ ಸ್ನೇಹಿತ ಹೇಳಿದ, ಅಲ್ಲಿಂದ ಕೆಳಗೆ ಬೀಳು. ಮೆಡಿಕಲ್ ಕಾಲೇಜಿನ ಹುಡುಗಿಯರೆಲ್ಲಾ ಕಾಣುತ್ತಾರೆ ಎಂದು!
***
ಮಗ ಸ್ಕೂಲಿಂದ ಬಂದು ನಿಂತುಕೊಂಡೇ ಊಟ ಮಾಡಲು ಶುರು ಮಾಡಿದ “ಹೀಗೇಕೋ?ಕುಳಿತುಕೊಂಡು ನಿಧಾನವಾಗಿ ಉಣ್ಣಬಾರದೆ” ಎಂದಳು ತಾಯಿ “ಈ ದಿನ ಸ್ಕೂಲಿನಲ್ಲಿ ಕುಳಿತು ಉಂಡರೆ ಕುಡಿಕೆ ಹಣ ಸಾಲುವುದಿಲ್ಲ ಎಂದು ಹೇಳಿಕೊಟ್ಟಿದ್ದಾರಮ್ಮ ಅದಕ್ಕೆ” ಎಂದು ಉತ್ತರಿಸಿದ ಮಗ!