ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಅಪರಿಚಿತ : ಚೆನ್ನಕೇಶವ ದೇವಾಲಯಕ್ಕೆ ಹೇಗಪ್ಪಾ ಹೋಗೋದು?
ರಾಜಕುಮಾರ : ಈ ರಸ್ತೆಯಲ್ಲಿ ನೇರವಾಗಿ ಹೋಗಿ ಸರ್.
ಅಪರಿಚಿತ : ತುಂಬಾ ಥ್ಯಾಂಕ್ಸ್ ನಿನ್ನ ಹೆಸರೇನಪ್ಪಾ?
ರಾಜಕುಮಾರ : ರಾಜಕುಮಾರ ಅಂತ ಸರ್.
ಅಪರಿಚಿತ : ಈ ಹೆಸರು ತುಂಬಾ ಪ್ರಸಿದ್ಧಿಯಲ್ಲಪ್ಪಾ ಎಲ್ಲರಿಗೂ ಗೊತ್ತಿರೋ ಹೆಸರು.
ರಾಜಕುಮಾರ : ಹೌದು ಸರ್, ತಮ್ಮಾತು ನಿಜ. ಈ ಬೀದಿ ಮಕ್ಕಳನ್ನೆಲ್ಲಾ ನಾನೇ ಆಟೋದಲ್ಲಿ ಕರ್ಕೊಂಡು ಹೋಗೋದು ಹೀಗಾಗಿ ನನ್ನ ಹೆಸರು ಎಲ್ಲರಿಗೂ ಅಪರಿಚಿತ.

Join Our Whatsapp Group

ಡಾಕ್ಟರ್ : ನೀವು ಯಾವ ಪೇಸ್ಟ್ ಉಪಯೋಗಿಸುತ್ತಿರಿ ?
ವಾಸು : ವಾಸು ಪೇಸ್ಟ್
ಡಾಕ್ಟರ್ : ಯಾವ ಸೋಪು ಉಪಯೋಗಿಸುತ್ತೀರಿ?
ವಾಸು : ವಾಸು ಸೋಪು.
ಡಾಕ್ಟರ್ : ಯಾವ ಹೇರ್ ಆಯಿಲ್ ಉಪಯೋಗಿಸ್ತೀರಿ?
ವಾಸು : ವಾಸು ಹೇರ್ ಆಯಲ್
ಡಾಕ್ಟರ್ : ಅರೆ ಇವು ಯಾವ ಬ್ರಾಂಡು ಈ ಹೆಸರೇ ಕೇಳಿಲ್ವಲ್ಲಾ
ವಾಸು : ಅದು ಬ್ರಾಂಡ್ ಅಲ್ಲಾ ಡಾಕ್ಟರ್ : ಅವೆಲ್ಲ ನನ್ನ ರೂಂಮೆಂಟ್ ವಾಸೂದು.

ವಾಸು: ಸಿಸ್ಟರ್ ಅರ್ಜೆಂಟ್ ಡಾಕ್ಟರನ್ನು ನೋಡಬೇಕಿತ್ತು ನನಗೆ ಹಾರ್ಟ್ ಟ್ರಬಲ್.
ಸಿಸ್ಟರ್, : ಡಾಕ್ಟರ್ ಇನ್ನೂ 15 ದಿನ ಸಿಗೋದಿಲ್ಲ.
ವಾಸು : ಅಷ್ಟರಲ್ಲಿ ನಾನು ಸತ್ತು ಹೋದರೆ?
ಸಿಸ್ಟರ್ : ನೀವು ಖಂಡಿತಾ ಸಾಯೋಲ್ಲ.
ವಾಸು : ಅದು ಹೇಗೆ ಹೇಳ್ತೀರಿ?
ಸಿಸ್ಟರ್ : ಸಾಯೋದೇನಿದ್ರೂ ನಮ್ ಡಾಕ್ಟರ್ ನೋಡಿದ್ಮೇಲೆ. ಅದಕ್ಕೆ ಮುಂಚೆ ಯಾರು ಸತ್ತಿಲ್ಲ.