ಮನೆ ರಾಜ್ಯ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿಗೆ ನ್ಯಾಕ್ ವತಿಯಿಂದ A+ ಮಾನ್ಯತೆ: ಎಟಿಎಂಇ ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್

ಎಟಿಎಂಇ ಇಂಜಿನಿಯರಿಂಗ್ ಕಾಲೇಜಿಗೆ ನ್ಯಾಕ್ ವತಿಯಿಂದ A+ ಮಾನ್ಯತೆ: ಎಟಿಎಂಇ ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್

0

ಮೈಸೂರು(Mysuru):  ಮೈಸೂರು-ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್‌ ಕಾಲೇಜಿಗೆ 2022-23 ನೇ ಸಾಲಿನಿಂದ 2025-27ನೇ ಸಾಲಿನವರೆಗೆ 5 ವರ್ಷಗಳ ಅವಧಿಗೆ ನ್ಯಾಕ್ ವತಿಯಿಂದ A+ ಮಾನ್ಯತೆ ದೊರೆತಿದೆ ಎಂದು ಎಟಿಎಂಇ ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್ ಮಾಹಿತಿ ನೀಡಿದರು.

ನಗರದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರಿನ ಇಂಜಿನಿಯರಿಂಗ್‌ ಕಾಲೇಜುಗಳ ಪೈಕಿ ಮೊದಲ ಆವೃತ್ತಿಯಲ್ಲೇ ಎ ಮಾನ್ಯತೆ ಪಡೆದ ಮೊದಲ ಇಂಜನಿಯರಿಂಗ್ ಕಾಲೇಜು ಹಾಗೂ ಬಿ.ಟಿ.ಯು ಮೈಸೂರು ವಲಯದಲ್ಲಿ 2ನೇಯ ಕಾಲೇಜಾಗಿದೆ ಎಂದರು.

ರಾಜ್ಯದಲ್ಲೇ A+ ಮಾನ್ಯತೆ ಪಡೆದ 7ನೇಯ ಕಾಲೇಜಾಗಿದ್ದ, ಈ 7 ಕಾಲೇಜುಗಳ ಪೈಕಿ A+ ಮಾನ್ಯತೆ ಪಡೆದ ಅತ್ಯಂತ ಕಿರಿಯ ಕಾಲೇಜು’ ಎಂಬ ಪ್ರಶಂಶೆಗೆ ಪಾತ್ರವಾಗಿದೆ. ಅಲ್ಲದೆ ಇಡೀ ದೇಶದಲ್ಲಿ ಮೊದಲನೆ ಆವೃತ್ತಿಯಲ್ಲ ಈ ಸಾಧನೆ ಮಾಡಿದ 47ನೇ ಇಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ ಎಂದು ತಿಳಿಸಿದರು.

ಆನ್ ಲೈನ್ ಮೂಲಕ ಅಪ್ಲೈ ಮಾಡಲಾಗಿದ್ದು ಎಲ್ಲಾ ಚಟುವಟಿಕೆಗಳನ್ನು ಗಮನಿಸಿ ಪರಿಶೀಲಿಸಿ ಪರಿಗಣಿಸಿ 1000 ಅಂಕಗಳಿಗೆ 700 ಅಂಕ ಪಡೆದಿದೆ. ಈ ಮಾನ್ಯತೆ ಪಾರದರ್ಶಕತೆಯಿಂದ ಕೂಡಿದೆ ಎಂದರು.

ಹಿಂದಿನ ಲೇಖನಮೆಟ್ರೊ ಕಾಮಗಾರಿ: ಗಿಡ ನೆಟ್ಟಿರುವುದು, ಮರ ಸ್ಥಳಾಂತರ ಕುರಿತು ಸಂಕ್ಷಿಪ್ತ ವರದಿ ಸಲ್ಲಿಸಲು ಹೈಕೋರ್ಟ್ ಆದೇಶ
ಮುಂದಿನ ಲೇಖನಬಿಜೆಪಿ- ಕಾಂಗ್ರೆಸ್ ಪಕ್ಷಗಳು ರಾಜಕೀಯ ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಲಿ: ಸಿಎಂ ಇಬ್ರಾಹಿಂ