ಮನೆ ರಾಜಕೀಯ ಬಿಜೆಪಿ- ಕಾಂಗ್ರೆಸ್ ಪಕ್ಷಗಳು ರಾಜಕೀಯ ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಲಿ: ಸಿಎಂ ಇಬ್ರಾಹಿಂ

ಬಿಜೆಪಿ- ಕಾಂಗ್ರೆಸ್ ಪಕ್ಷಗಳು ರಾಜಕೀಯ ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಲಿ: ಸಿಎಂ ಇಬ್ರಾಹಿಂ

0

ಮೈಸೂರು(Mysuru): ಬಿಜೆಪಿ – ಕಾಂಗ್ರೆಸ್ ಟಿಪ್ಪು ಹೆಸರಲ್ಲಿ ರಾಜಕೀಯ ಮಾಡುತ್ತಿವೆ. ರಾಜಕೀಯ ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯಗೆ ಟಿಪ್ಪು ಜಯಂತಿ ಬೇಡ, ಟಿಪ್ಪು ಜಯಂತಿ ಅಗತ್ಯವೂ ನಮಗಿಲ್ಲ ಎಂದು ನಾನು ಅಂದೇ ಹೇಳಿದ್ದೆ. ಆದರೆ, ಅವರು ಕೇಳಲಿಲ್ಲ ಎಂದರು.

ಟಿಪ್ಪು ಪ್ರತಿಮೆ ಸ್ಥಾಪನೆ ಸಂಬಂಧ ಶಾಸಕ ತನ್ವೀರ್ ಸೇಠ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಮ್ಮ ಸಮುದಾಯದಲ್ಲಿ ಪ್ರತಿಮೆ, ಮೂರ್ತಿ ಎಂಬುದಿಲ್ಲ. ಹೀಗಾಗಿ ಟಿಪ್ಪು ಪ್ರತಿಮೆ ನಿರ್ಮಿಸುವ ಪ್ರಶ್ನೆಯೇ ಇಲ್ಲ. ರಾಜಕೀಯಕ್ಕಾಗಿ ಧರ್ಮ ಬಳಸಿಕೊಳ್ಳಬಾರದು. ತನ್ವೀರ್ ಸೇಠ್ ಪ್ರತಿಮೆ ನಿರ್ಮಿಸುತ್ತೇನೆಂದೂ ಮುಂದಾದರೆ ಅವನಿಗೂ ಉಸ್ಮಾನಿಗಳಿಂದ ಮಾಹಿತಿ ಪಡೆದು ಮಾತನಾಡುವಂತೆ ಹೇಳುತ್ತೇನೆ. ನಮ್ಮ ಇಸ್ಲಾಂ ಧರ್ಮದಲ್ಲಿ ಜಗತ್ತಿನ ಯಾವ ಭಾಗದಲ್ಲೂ ಎಲ್ಲಿಯೂ ಪ್ರತಿಮೆ ನಿರ್ಮಿಸಿಲ್ಲ. ಹೀಗಾಗಿ ನಾವು ಟಿಪ್ಪು ಪ್ರತಿಮೆ ನಿರ್ಮಿಸಲ್ಲ‌ ಎಂದರು.

ಹಿಂದೂ- ಮುಸ್ಲಿಂರು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದಾರೆ. ಆದರೆ, ಬಿಜೆಪಿಯವರು ಹುಳಿ ಹಿಂಡುತ್ತಿದ್ದಾರೆ. ಸಂಸದ ಪ್ರತಾಪಸಿಂಹ ಅಭಿವೃದ್ಧಿ ಕೆಲಸ ಮಾಡದೇ, ಧರ್ಮಗಳ ನಡುವೆ ಕಿತ್ತಾಡುವಂತೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಇಬ್ರಾಹಿಂ ಕಿಡಿಕಾರಿದರು.

ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದಾಗ, ಮೈಸೂರು ಅಥವಾ ಕೋಲಾರದಲ್ಲಿ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಟಿಪ್ಪು ನೈಜ ಕನಸುಗಳ ವಿರುದ್ಧ ಕೋರ್ಟ್​ಗೆ: ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಟಿಪ್ಪ ನೈಜ ಕನಸು ಪುಸ್ತಕದಲ್ಲಿ ಇಷ್ಟಬಂದಂತೆ ಬರೆದಿದ್ದಾರೆ. ಈ ಸಂಬಂಧ ನಾವು ಕೋಟ್೯ಗೆ ಹೋಗುತ್ತೇವೆ ಎಂದರು.

ಹಿಂದಿನ ಲೇಖನಎಟಿಎಂಇ ಇಂಜಿನಿಯರಿಂಗ್ ಕಾಲೇಜಿಗೆ ನ್ಯಾಕ್ ವತಿಯಿಂದ A+ ಮಾನ್ಯತೆ: ಎಟಿಎಂಇ ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್
ಮುಂದಿನ ಲೇಖನಮಂಡ್ಯ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತರಿಂದ ಬೃಹತ್ ಪ್ರತಿಭಟನಾ ರ್ಯಾಲಿ