ಮನೆ ರಾಜ್ಯ ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ಎಲ್‌ಪಿಜಿ ಆಟೋ ಗ್ಯಾಸ್‌ಗಾಗಿ ಒತ್ತಾಯಿಸಿ, ವಿನೂತನ ಚಳವಳಿ – ವಾಟಾಳ್...

ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ಎಲ್‌ಪಿಜಿ ಆಟೋ ಗ್ಯಾಸ್‌ಗಾಗಿ ಒತ್ತಾಯಿಸಿ, ವಿನೂತನ ಚಳವಳಿ – ವಾಟಾಳ್ ನಾಗರಾಜ್‌

0

ಬೆಂಗಳೂರು : ಎಲ್‌ಪಿಜಿ ಆಟೋ ಗ್ಯಾಸ್ ಸಿಕ್ತಾ ಇಲ್ಲ, ಗೃಹ ಬಳಕೆ ಸಿಲಿಂಡರ್ ಸಿಕ್ತಾ ಇಲ್ಲ, ವಾಣಿಜ್ಯ ಬಳಕೆ ಸಿಲಿಂಡರ್ ಸಿಕ್ತಾ ಇಲ್ಲ, ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ್ದಾರೆ. ಸರ್ಕಾರ ಹಾಗೂ ವಿರೋಧ ಪಕ್ಷ ದಾವಣಗೆರೆ, ಬಾಗಲಕೋಟೆಯಲ್ಲಿ ಸೇರಿಕೊಂಡಿದ್ದಾರೆ ಎಂದು ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ಎಲ್‌ಪಿಜಿ ಆಟೋ ಗ್ಯಾಸ್‌ಗಾಗಿ ಒತ್ತಾಯಿಸಿ ವಿನೂತನ ಚಳವಳಿಯನ್ನು ಇಂದು ಕನ್ನಡ ಚಳವಳಿ ವಾಟಾಳ್ ಪಕ್ಷ ವಾಟಾಳ್ ನಾಗರಾಜ್‌ ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಆಟೋ ಬೇಡಿಕೆ ಈಡೇರಿಸಲೇಬೇಕು, ಆಟೋ ಚಾಲಕರು ಬಡವರು, ಬಾಡಿಗೆ ಇಲ್ಲದೇ ಬೀದಿ-ಬೀದಿಯಲ್ಲಿ ಆಟೋರಿಕ್ಷಾ ನಿಲ್ಲಿಸಿದ್ದಾರೆ. ಕರುಳು ಹಿಂಡುವ ಪರಿಸ್ಥಿತಿ ಇದೆ. ಚಾಲಕರ ಮನೆಗಳಲ್ಲಿ ಖಾಲಿ ಪಾತ್ರೆಗಳು, ಹಣವಿಲ್ಲದೇ ಮಕ್ಕಳನ್ನು ಓದಿಸಲು ಆಗುತ್ತಿಲ್ಲ. ಮನೆಗೆ ಆಹಾರ ಕೊಡಲು ಆಗುತ್ತಿಲ್ಲ ಎಂದರು.

ಕೂಡಲೇ ಎಲ್‌ಪಿಜಿ ಗ್ಯಾಸ್ ಅನ್ನು ಒದಗಿಸಬೇಕು. ಎಲ್‌ಪಿಜಿ ಗ್ಯಾಸ್ ಕೊಡದಿದ್ದರೆ ತೀವ್ರವಾಗಿ ಹೋರಾಟಕ್ಕೆ ಕನ್ನಡ ಚಳವಳಿ ವಾಟಾಳ್ ಪಕ್ಷ ಸಿದ್ಧವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇಡೀ ರಾಜ್ಯಾದ್ಯಂತ ಆಟೋ ಬಂದ್ ಮಾಡಬೇಕಾಗುತ್ತದೆ. ಆಟೋ ಎಲ್‌ಪಿಜಿ ಗ್ಯಾಸ್‌ಗಾಗಿ ಒತ್ತಾಯಿಸಿ ಚಳುವಳಿ ನಡೆಸಿದರು.

ವಿನೂತನ ಚಳವಳಿಗೆ ಹೆಸರಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ಶ್ರೀ ವಾಟಾಳ್ ನಾಗರಾಜ್‌ರವರ ನೇತೃತ್ವದಲ್ಲಿ ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ಆಟೋ ರಿಕ್ಷಾವನ್ನು ಒಂಟೆತ್ತಿನ ಗಾಡಿಯಿಂದ ಎಳೆದುಕೊಂಡು ಹೋಗುವ ಮೂಲಕ ವಿನೂತನ ಚಳವಳಿ ನಡೆಸಿದರು.