ಮನೆ ಸುದ್ದಿ ಜಾಲ ಹಳದಿ ಶಾಸ್ತ್ರದ ವೇಳೆ ಅವಘಡ: ದೇಹ ಸುಟ್ಟರೂ ವಧುವನ್ನೇ ಮದುವೆಯಾದ ವರ!

ಹಳದಿ ಶಾಸ್ತ್ರದ ವೇಳೆ ಅವಘಡ: ದೇಹ ಸುಟ್ಟರೂ ವಧುವನ್ನೇ ಮದುವೆಯಾದ ವರ!

0

ಕಾನ್ಪುರ, ಮೇ 29: ಮದುವೆಗೂ ಮುನ್ನ ನಡೆದ ಹಳದಿ ಶಾಸ್ತ್ರದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ವಧು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಯುವತಿಯ ದೇಹದ ಹಲವೆಡೆ ಸುಟ್ಟ ಗಾಯಗಳಾಗಿದ್ದು, ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆಯ ಬಳಿಕ ವಧುವಿನ ಆರೋಗ್ಯ ಸ್ಥಿತಿ ಕಂಡು ಕುಟುಂಬಸ್ಥರು ಮದುವೆ ನಡೆಯದೇ ಹೋಗಬಹುದೆಂಬ ಆತಂಕಕ್ಕೊಳಗಾಗಿದ್ದರು. ಆದರೆ, ವರ ಮಾತ್ರ ಸಂಕಷ್ಟದ ಸಮಯದಲ್ಲಿ ಹಿಂದೆ ಸರಿಯದೆ, ಆಕೆಯನ್ನೇ ಮದುವೆಯಾಗುವುದಾಗಿ ದೃಢ ನಿರ್ಧಾರ ಕೈಗೊಂಡಿದ್ದಾನೆ.

ರೂಪಕ್ಕಿಂತ ಮಾನವೀಯತೆ ಮತ್ತು ಗುಣ ಮುಖ್ಯ ಎಂದು ಹೇಳಿದ ವರ, ಆಸ್ಪತ್ರೆಯಲ್ಲೇ ವಧುವಿನ ಕೈ ಹಿಡಿದು ಮದುವೆಯಾಗಿದ್ದಾನೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು, ನಿಜವಾದ ಪ್ರೀತಿಗೆ ಈ ಜೋಡಿ ಉದಾಹರಣೆಯಾಗಿದೆ ಎಂದು ಹಲವರು ಪ್ರಶಂಸಿಸಿದ್ದಾರೆ.