ಮನೆ ಸುದ್ದಿ ಜಾಲ ಪ್ರೇಮಲೋಕದ ನಟಿ ಜೂಹಿ ಚಾವ್ಲಾ ಕುಟುಂಬಕ್ಕೆ ಮತ್ತೊಂದು ಖುಷಿಯ ಸುದ್ದಿ, ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡ...

ಪ್ರೇಮಲೋಕದ ನಟಿ ಜೂಹಿ ಚಾವ್ಲಾ ಕುಟುಂಬಕ್ಕೆ ಮತ್ತೊಂದು ಖುಷಿಯ ಸುದ್ದಿ, ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡ ಸ್ಟಾರ್ ನಟಿ!

0

ಮುಂಬೈ (ಮೇ.23): ಬಾಲಿವುಡ್‌ನ ಖ್ಯಾತ ನಟಿ ಜೂಹಿ ಚಾವ್ಲಾ ಅವರ ಕುಟುಂಬದಲ್ಲಿ ಮತ್ತೊಮ್ಮೆ ಸಂತಸದ ಕ್ಷಣ ಮೂಡಿದೆ. ಜೂಹಿ ಚಾವ್ಲಾ ಹಾಗೂ ಉದ್ಯಮಿ ಜಯ್ ಮೆಹ್ತಾ  ದಂಪತಿಯ ಪುತ್ರ ಅರ್ಜುನ್ ಮೆಹ್ತಾ ಅಮೆರಿಕದ ಪ್ರತಿಷ್ಠಿತ  ‘ಕೊಲಂಬಿಯಾ ವಿಶ್ವವಿದ್ಯಾಲಯ ಯಿಂದ ಯಶಸ್ವಿಯಾಗಿ ಪದವಿ ಪಡೆದಿದ್ದಾರೆ. ಪುತ್ರನ ಸಾಧನೆಯಿಂದ ಹರ್ಷಗೊಂಡಿರುವ ಜೂಹಿ ಚಾವ್ಲಾ, ನ್ಯೂಯಾರ್ಕ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಜೂಹಿ ಚಾವ್ಲಾ ಕುಟುಂಬದ ಸದಸ್ಯರು  ‘ಕೊಲಂಬಿಯಾ ವಿಶ್ವವಿದ್ಯಾಲಯ ಯಲ್ಲಿ ಪದವಿ ಪಡೆಯುತ್ತಿರುವುದು ಇದೇ ಮೊದಲಲ್ಲ. 2023ರಲ್ಲಿ ಅವರ ಪುತ್ರಿ ಜಾನ್ವಿ ಮೆಹ್ತಾ ಕೂಡ ಇದೇ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದ್ದರು.

ನಟಿ ಜೂಹಿ ಚಾವ್ಲಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅರ್ಜುನ್ ಮೆಹ್ತಾ ಅವರ ಗ್ರಾಜುಯೇಷನ್ ಸಮಾರಂಭದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜನರಿಂದ ತುಂಬಿದ್ದ ಸಭಾಂಗಣದಲ್ಲಿ ಅರ್ಜುನ್ ಮೆಹ್ತಾ ಅವರ ಹೆಸರನ್ನು ಘೋಷಿಸುತ್ತಿದ್ದಂತೆ, ಅಲ್ಲಿದ್ದ ಸ್ನೇಹಿತರು, ಕುಟುಂಬ ಸದಸ್ಯರು ಹಾಗೂ ನೆರೆದಿದ್ದ ಜನರು ಭಾರೀ ಚಪ್ಪಾಳೆ ಮತ್ತು ಶಿಳ್ಳೆ ಮೂಲಕ ಅಭಿನಂದಿಸಿದರು.

ಕೊಲಂಬಿಯಾ ವಿಶ್ವವಿದ್ಯಾಲಯದ ತಿಳಿ ನೀಲಿ ಬಣ್ಣದ ಗ್ರಾಜುಯೇಟ್ ಗೌನ್, ಹ್ಯಾಟ್ ಹಾಗೂ ಡಾರ್ಕ್ ಟೈ ಧರಿಸಿದ್ದ ಅರ್ಜುನ್ ಮೆಹ್ತಾ ಆತ್ಮವಿಶ್ವಾಸದಿಂದ ವೇದಿಕೆಯತ್ತ ಸಾಗಿದರು. ಬಳಿಕ ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಪದವಿ ಪ್ರಮಾಣಪತ್ರ ಸ್ವೀಕರಿಸಿದರು. ಈ ವಿಡಿಯೋ ಹಂಚಿಕೊಂಡ ಜೂಹಿ ಚಾವ್ಲಾ, “Columbia Proud Graduation” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.ಈ ಹಿಂದೆ 2023ರಲ್ಲಿ ಪುತ್ರಿ ಜಾನ್ವಿ ಮೆಹ್ತಾ ಪದವಿ ಪಡೆದಾಗಲೂ ಜೂಹಿ ಚಾವ್ಲಾ ಭಾವುಕ ಪೋಸ್ಟ್ ಹಂಚಿಕೊಂಡಿದ್ದರು. ಹಳೆಯ ಸಂದರ್ಶನವೊಂದರಲ್ಲಿ ಮಗಳ ಪ್ರತಿಭೆಯ ಬಗ್ಗೆ ಮಾತನಾಡಿದ್ದ ಜೂಹಿ, ಜಾನ್ವಿ ಅಕಾಡೆಮಿಕ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ ಎಂದು ಹೇಳಿಕೊಂಡಿದ್ದರು.

ಜಾನ್ವಿ IGCSE ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿದ್ದು, ಇತಿಹಾಸ ವಿಷಯದಲ್ಲಿ ಭಾರತದಲ್ಲೇ ಟಾಪರ್ ಆಗಿದ್ದರು. ಐಬಿ ಪರೀಕ್ಷೆಯಲ್ಲೂ ಶಾಲೆಗೆ ಮೊದಲ ಸ್ಥಾನ ಪಡೆದಿದ್ದರು. ಜೊತೆಗೆ  ‘ಕೊಲಂಬಿಯಾ ವಿಶ್ವವಿದ್ಯಾಲಯ ಯ ಡೀನ್ಸ್ ಲಿಸ್ಟ್‌ನಲ್ಲೂ ಜಾನ್ವಿ ಹೆಸರು ಸೇರಿತ್ತು ಎಂದು ಜೂಹಿ ತಿಳಿಸಿದ್ದರು.ಜಾನ್ವಿ ಮೆಹ್ತಾಗೆ ಸಿನಿಮಾ ಕ್ಷೇತ್ರಕ್ಕಿಂತ ಕ್ರಿಕೆಟ್ ಹಾಗೂ ಆಡಳಿತ ಕ್ಷೇತ್ರದ ಮೇಲೆ ಹೆಚ್ಚು ಆಸಕ್ತಿ ಇದೆ ಎಂದು ಜೂಹಿ ಚಾವ್ಲಾ ಈ ಹಿಂದೆ ಸ್ಪಷ್ಟಪಡಿಸಿದ್ದರು.

ನಟಿ ಜೂಹಿ ಚಾವ್ಲಾ   ಅವರು 1995ರಲ್ಲಿ ಉದ್ಯಮಿ ಜಯ್ ಮೆಹ್ತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಪುತ್ರಿ ಜಾನ್ವಿ ಮೆಹ್ತಾ 2001ರಲ್ಲಿ ಜನಿಸಿದ್ದು, ಪುತ್ರ ಅರ್ಜುನ್ ಮೆಹ್ತಾ 2003ರಲ್ಲಿ ಜನಿಸಿದ್ದಾರೆ. ಇದೀಗ ಇಬ್ಬರೂ ಮಕ್ಕಳು ಅಮೆರಿಕದ ಐವಿ ಲೀಗ್ ವಿಶ್ವವಿದ್ಯಾಲಯಗಳಲ್ಲಿ ಒಂದಾದ ‘ಕೊಲಂಬಿಯಾ ವಿಶ್ವವಿದ್ಯಾಲಯ  ಯಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿರುವುದು ಕುಟುಂಬದ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ.