ಮನೆ ರಾಜ್ಯ ಶೆಡ್ ಮೇಲೆ ಅಪಾರ್ಟ್ ಮೆಂಟ್  ಗೋಡೆ ಕುಸಿತ:  ಕಾರ್ಮಿಕರ ಸಾವು

ಶೆಡ್ ಮೇಲೆ ಅಪಾರ್ಟ್ ಮೆಂಟ್  ಗೋಡೆ ಕುಸಿತ:  ಕಾರ್ಮಿಕರ ಸಾವು

0

ಬೆಂಗಳೂರು(Bengaluru):  ಶೆಡ್ ಮೇಲೆ ಅಪಾರ್ಟ್ ಮೆಂಟ್ ನ ಗೋಡೆ ಕುಸಿದು ಬಿದ್ದ ಪರಿಣಾಮ ಕಾರ್ಮಿಕರು ಮೃತಪಟ್ಟಿರುವ ಘಟನೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಹಳ್ಳಿ ಸೌಖ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಮನೋಜ್ ಕುಮಾರ್ ಸದಯ್ (35 ), ರಾಮ್ ಕುಮಾರ್ ಸದಯ್ (25), ನಿತೀಶ್ ಕುಮಾರ್ ಸದಯ್ (22) ಮೃತ ದುರ್ದೈವಿಗಳು.

ಶೆಡ್​ ನಲ್ಲಿ ಒಟ್ಟು 8 ಕಾರ್ಮಿಕರು ಮಲಗಿದ್ದರು. ಈ ವೇಳೆ ಅಪಾರ್ಟ್​ಮೆಂಟ್ ಗೋಡೆ ಆಕಸ್ಮಿಕವಾಗಿ ಕುಸಿದು ಬಿದ್ದ ಕಾರಣ ಸ್ಥಳದಲ್ಲಿ ಮೂವರು ಕಾರ್ಮಿಕರು ಸಾವನ್ನಪಿದ್ದು, ಉಳಿದ ನಾಲ್ಕು ಕಾರ್ಮಿಕರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗಾಯಗೊಂಡ ನಾಲ್ವರು ಕಾರ್ಮಿಕರಾದ, ಸುನಿಲ್ ಮಂಡಲ್, ಶಂಭು ಮಂಡಲ, ದಿಲೀಪ್, ದುರ್ಗೇಶ್​ ಎಂಬುರವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಪಟ್ಟ ಕಾರ್ಮಿಕರು ಬಿಹಾರ  ಮೂಲದ ನಿವಾಸಿಗಳೆಂದು ತಿಳಿದು ಬಂದಿದೆ, ಸ್ಥಳಕ್ಕೆ ಭೇಟಿ ನೀಡಿದ ಎಎಸ್​ಪಿ ಪುರುಷೋತ್ತಮ್ ಹಾಗೂ ಹೊಸಕೋಟೆ ಡಿವೈಎಸ್​ಪಿ ಉಮಾಶಂಕರ್ ರವರು ಪರಿಶೀಲನೆ ನಡೆಸಿದ್ದಾರೆ.

ಹಿಂದಿನ ಲೇಖನವಿದ್ಯಾರ್ಥಿಗಳ ಕಿಸ್ಸಿಂಗ್ ಪಂದ್ಯ: ವಿಡಿಯೋ ವೈರಲ್ ಮಾಡಿದ ಯುವಕನ ವಿಚಾರಣೆ
ಮುಂದಿನ ಲೇಖನಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಡಾ. ವೀರೇಂದ್ರ ಹೆಗ್ಗಡೆ