ಮನೆ ಕ್ರೀಡೆ ಆ್ಯಶಸ್ ಸರಣಿಯ 3ನೇ ಟೆಸ್ಟ್ ಪಂದ್ಯ: ಕ್ಯಾಚ್ ​ಗಳ ಮೂಲಕ ದಾಖಲೆ ಬರೆದ ಸ್ಟೀವ್ ಸ್ಮಿತ್

ಆ್ಯಶಸ್ ಸರಣಿಯ 3ನೇ ಟೆಸ್ಟ್ ಪಂದ್ಯ: ಕ್ಯಾಚ್ ​ಗಳ ಮೂಲಕ ದಾಖಲೆ ಬರೆದ ಸ್ಟೀವ್ ಸ್ಮಿತ್

0

ಲೀಡ್ಸ್​ ನಲ್ಲಿ ನಡೆಯುತ್ತಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ 3ನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಕ್ಯಾಚ್ ಹಿಡಿಯುವ ಮೂಲಕ ಸ್ಟೀವ್ ಸ್ಮಿತ್ ದಾಖಲೆ ನಿರ್ಮಿಸಿದ್ದಾರೆ.

Join Our Whatsapp Group

ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ ​ನಲ್ಲಿ ಸ್ಟೀವ್ ಸ್ಮಿತ್ ಒಟ್ಟು 5 ಕ್ಯಾಚ್​ ಗಳನ್ನು ಹಿಡಿದಿದ್ದರು. ಇದರೊಂದಿಗೆ ಆ್ಯಶಸ್ ಸರಣಿಯಲ್ಲಿ ಅತ್ಯಧಿಕ ಕ್ಯಾಚ್ ​ಗಳನ್ನು ಹಿಡಿದ ವಿಶೇಷ ದಾಖಲೆಯೊಂದು ಸ್ಮಿತ್ ಹೆಸರಿಗೆ ಸೇರ್ಪಡೆಯಾಯಿತು.

ಈ ಪಟ್ಟಿಯಲ್ಲಿ 62 ಇನಿಂಗ್ಸ್​ಗಳಲ್ಲಿ 54 ಕ್ಯಾಚ್ ​ಗಳನ್ನು ಹಿಡಿದ ಆಸ್ಟ್ರೇಲಿಯಾದ ಮಾಜಿ ಆಟಗಾರ ಇಯಾನ್ ಬಾಥಂ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 65 ಇನಿಂಗ್ಸ್​ ಗಳ ಮೂಲಕ ಸ್ಟೀವ್ ಸ್ಮಿತ್ ಕೂಡ 54 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಈ ಮೂಲಕ ಬಾಥಂ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇನ್ನು ಟೆಸ್ಟ್ ಇನಿಂಗ್ಸ್​ ವೊಂದರಲ್ಲಿ ಅತ್ಯಧಿಕ ಬಾರಿ 4 ಕ್ಕಿಂತ ಹೆಚ್ಚಿನ ಕ್ಯಾಚ್ ​ಗಳನ್ನು ಹಿಡಿದ ವಿಶೇಷ ದಾಖಲೆ ಒಂದು ಸ್ಟೀವ್​ ಸ್ಮಿತ್ ಪಾಲಾಗಿದೆ. ಸ್ಮಿತ್ ಇದುವರೆಗೆ 4 ಬಾರಿ ಇನಿಂಗ್ಸ್ ​ವೊಂದರಲ್ಲಿ 4 ಕ್ಕಿಂತ ಹೆಚ್ಚಿನ ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ಮೊದಲ ಆಸ್ಟ್ರೇಲಿಯನ್ ಫೀಲ್ಡರ್ ಎಂಬ ಹೆಗ್ಗಳಿಕೆಗೂ ಸ್ಮಿತ್ ಪಾತ್ರರಾಗಿರುವುದು ವಿಶೇಷ.

ರೋಚಕ ಪೈಪೋಟಿಯತ್ತ ಮೂರನೇ ಟೆಸ್ಟ್:

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್ (118) ಭರ್ಜರಿ ಶತಕ ಸಿಡಿಸಿದ್ದರು. ಇದಾಗ್ಯೂ ಮಾರ್ಕ್​ ವುಡ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​ನಲ್ಲಿ 263 ರನ್​ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಮಾರ್ಕ್​ ವುಡ್ 5 ವಿಕೆಟ್ ಕಬಳಿಸಿ ಮಿಂಚಿದರು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಪ್ಯಾಟ್ ಕಮಿನ್ಸ್ ಎಸೆತಗಳು ಮಾರಕವಾಗಿ ಪರಿಣಮಿಸಿತು. ಆದರೆ ಕೆಲ ಕ್ರಮಾಂಕದಲ್ಲಿ 80 ರನ್​ ಬಾರಿಸುವ ಮೂಲಕ ಬೆನ್ ಸ್ಟೋಕ್ಸ್ ತಂಡಕ್ಕೆ ಆಸರೆಯಾದರು. ಆದರೆ ಕಮಿನ್ಸ್ ಕರಾರುವಾಕ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಮೊದಲ ಇನಿಂಗ್ಸ್​ ಅನ್ನು 237 ರನ್​ಗಳಿಗೆ ಅಂತ್ಯಗೊಳಿಸಿತು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ 6 ವಿಕೆಟ್ ಉರುಳಿಸಿದರು.

ಇದೀಗ ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಆಸ್ಟ್ರೇಲಿಯಾ ತಂಡವು 47 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 116 ರನ್​ ಕಲೆಹಾಕಿದೆ. ಕ್ರೀಸ್ ​ನಲ್ಲಿ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಹಿಂದಿನ ಲೇಖನಮಕ್ಕಳಲ್ಲಿ ವಿಶ್ವಪ್ರಜ್ಞೆ-ವೈಚಾರಿಕತೆ ಬೆಳೆಸುವುದು ಸರ್ಕಾರದ ಆದ್ಯತೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂದಿನ ಲೇಖನರಾಜ್ಯದಲ್ಲಿ ಮಳೆ: 20 ಜನರು ಬಲಿ, 40ಕ್ಕೂ ಹೆಚ್ಚು ಜಾನುವಾರುಗಳು ಮೃತ