ಮನೆ ಅಪರಾಧ ಆನೆ ದಂತದಿಂದ ತಯಾರಿಸಿದ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನ: ಐವರ ಬಂಧನ

ಆನೆ ದಂತದಿಂದ ತಯಾರಿಸಿದ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನ: ಐವರ ಬಂಧನ

0

ಹುಬ್ಬಳ್ಳಿ: ಆನೆ ದಂತಗಳಿಂದ ತಯಾರಿಸಿದ ಬೆಲೆಬಾಳುವ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಅಪರಾಧ ತನಿಖಾ ವಿಭಾಗದ ವಿಶೇಷ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬುಧವಾರ ಬಂಧಿಸಿದ್ದು, ಕಲಾಕೃತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಕೊಲ್ಹಾಪುರದಿಂದ ತಂದ ಕಲಾಕೃತಿಗಳನ್ನು ಹೊಸ ಬಸ್ ನಿಲ್ದಾಣದ ಬಳಿ ಮಾರಾಟ ಮಾಡುವ ಯತ್ನದಲ್ಲಿದ್ದಾಗ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆನೆ ದಂತಗಳಿಂದ ತಯಾರಿಸಿದ 384 ಗ್ರಾಂ ಆಲಂಕಾರಿಕ ಪೆಟ್ಟಿಗೆ, ಕೆಂಪು ಹರಳು ಇರುವ 112 ಗ್ರಾಂ ತೂಕದ ಒಂದು ಖಡ್ಗ, 350 ಗ್ರಾಂ ತೂಕದ ಆಯತಾಕಾರದ ಒಂದು ಪೆಟ್ಟೆಗೆ ಹಾಗೂ 279 ಗ್ರಾಂ ತೂಕದ ಮೊಟ್ಟೆಯಾಕಾರದ ಪೆಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ.

ಕೊಲ್ಹಾಪುರದ ಸಾತ್ ಶಹಜಾನ ಜಮಾದಾರ, ವಿಜಯ್ ರಾಜಾರಾಂ ಕುಂಬಾರ, ಸಾಗರ ಸುಭಾಷ ಪರಾಣಿಕ, ನಿಪ್ಪಾಣಿಯ ವಿನಾಯಕ ನಾಮದೇವ ಕಾಂಬ್ಲೆ ಮತ್ತು ದಾನಜೀ ಪಾಂಡುರಂಗ ಪಾಟೀಲ ಬಂಧಿತರು. ಇವರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ನೇತೃತ್ವದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ‌ಪ್ರಸಾದ ಪಣೇಕರ್ ಹಾಗೂ ಸಿಬ್ಬಂದಿ ಎಲ್.ಎ. ಪಾಠಕ, ಅಶೋಕ ನಾಗರಳ್ಳಿ, ರವೀಂದ್ರ ಗೋಣೆನವರ, ಎಸ್.ಎಚ್.ಹುಲಗೇರ, ದಿವ್ಯ ಎಸ್. ನಾಯ್ಕ ಪಾಲ್ಗೊಂಡಿದ್ದರು.

ಹಿಂದಿನ ಲೇಖನಸಚಿವ ಅಶ್ವತ್ ನಾರಾಯಣ್ ವಿರುದ್ಧ ಮೈಸೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ
ಮುಂದಿನ ಲೇಖನಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ: ಪೊಲೀಸ್ ಆಯುಕ್ತ ರಮೇಶ್ ಬಾನೋತ್