ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
40750 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 19 ನೇ ವಾರ್ಷಿಕ ಘಟಿಕೋತ್ಸವ

0
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 19ನೇ ವಾರ್ಷಿಕ ಘಟಿಕೋತ್ಸವವನ್ನು ಮಾ.03 ರಂದು ಮಧ್ಯಾಹ್ನ 12 ಗಂಟೆಗೆ ಕರಾಮುವಿ ಯ ಘಟಿಕೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕುಲಪತಿಗಳಾದ ಪ್ರೊ. ಶರಣಪ್ಪ ವಿ.ಹಲಸೆ ರವರು ತಿಳಿಸಿದರು. ಇಂದು ವಿಶ್ವವಿದ್ಯಾನಿಲಯದ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ರವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿಗಳು ಬಿ.ಎಸ್ ಪಾಟೀಲ್ ರವರು ಘಟಿಕೋತ್ಸವ ಭಾಷಣವನ್ನು ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಮ ಕುಲಾಧಿಪತಿಗಳಾದ ಡಾ. ಎಂ.ಸಿ. ಸುಧಾಕರ್ ರವರು ಘಟಿಕೋತ್ಸವದಲ್ಲಿ ಉಪಸ್ಥಿತರಿರಲಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಶರಣಪ್ಪ ವಿ. ಹಲಸೆ ರವರು ಘಟಿಕೋತ್ಸವದ ಸ್ವಾಗತ ಮತ್ತು ಅತಿಥಿಗಳ ಪರಿಚಯವನ್ನು ಮಾಡುವರು.  ಘಟಿಕೋತ್ಸವದಲ್ಲಿ ಮೂವರು ಗಣ್ಯರುಗಳಾದ ಬೆಂಗಳೂರಿನ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾದ ಡಾ. ಹೆಚ್.ಸಿ. ಸತ್ಯನ್, ಚಿತ್ರದುರ್ಗದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಕೆ.ಎಂ. ವೀರೇಶ್, ಹಾಗೂ ಮಂಡ್ಯದ ಎಸ್.ಬಿ. ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿಗಳಾದ ಮೀರಾ ಶಿವಲಿಂಗಯ್ಯ ರವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುವುದು. 03 ಪಿಹೆಚ್ ಡಿ, 30 ಚಿನ್ನದ ಪದಕಗಳು ಮತ್ತು 37 ನಗದು ಬಹುಮಾನಗಳನ್ನು ವಿದ್ಯಾರ್ಥಿಗಳು ಪಡೆದಿದ್ದು, ಇವರನ್ನೊಳಗೊಂಡoತೆ 7,869 ಅಭ್ಯರ್ಥಿಗಳು ವಿವಿಧ ಪದವಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಒಟ್ಟು 67 ವಿದ್ಯಾರ್ಥಿಗಳಲ್ಲಿ 14 ಪುರುಷರು ಮತ್ತು 53 ಮಹಿಳೆಯರಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಪ್ರಧಾನ ಮಾಡಲಾಗುವುದು. ಕನ್ನಡ, ಇತಿಹಾಸ ಹಾಗೂ ರಾಜ್ಯಶಾಸ್ತç ವಿಷಯಗಳಲ್ಲಿ 03 ಪುರುಷರು ಪಿಎಚ್‌ಡಿ ಪದವಿಯನ್ನು ಪಡೆದಿರುತ್ತಾರೆ. ಕನ್ನಡ ವಿಷಯದಲ್ಲಿ ಒಟ್ಟು 496 ವಿದ್ಯಾರ್ಥಿಗಳಲ್ಲಿ 161 ಪುರುಷರು ಹಾಗೂ 335 ಮಹಿಳೆಯರು, ಇಂಗ್ಲೀಷ್ ವಿಷಯದಲ್ಲಿ ಒಟ್ಟು 411 ವಿದ್ಯಾರ್ಥಿಗಳಲ್ಲಿ 135 ಪುರುಷರು ಹಾಗೂ 276 ಮಹಿಳೆಯರು, ಹಿಂದಿ ವಿಷಯದಲ್ಲಿ ಒಟ್ಟು 75 ವಿದ್ಯಾರ್ಥಿಗಳಲ್ಲಿ 30 ಪುರುಷರು ಹಾಗೂ 45 ಮಹಿಳೆಯರು, ಸಂಸ್ಕೃತ ವಿಷಯದಲ್ಲಿ ಒಟ್ಟು 16 ವಿದ್ಯಾರ್ಥಿಗಳಲ್ಲಿ 11 ಪುರುಷರು ಹಾಗೂ 05 ಮಹಿಳೆಯರು, ಉರ್ದು ವಿಷಯದಲ್ಲಿ ಒಟ್ಟು 18 ವಿದ್ಯಾರ್ಥಿಗಳಲ್ಲಿ 04 ಪುರುಷರು ಮತ್ತು 14 ಮಹಿಳೆಯರು ಸ್ನಾತ್ತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಸಮಾಜ ವಿಜ್ಞಾನ ವಿಷಯಗಳಾದ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಸಾರ್ವಜನಿಕ ಆಡಳಿತ ಹಾಗೂ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಒಟ್ಟು 1239 ವಿದ್ಯಾರ್ಥಿಗಳಲ್ಲಿ 484 ಪುರುಷರು ಮತ್ತು 755 ಮಹಿಳೆಯರು ಸ್ನಾತ್ತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಬಿ.ಕಾಂ. ವಿಭಾಗದಲ್ಲಿ ಒಟ್ಟು 178 ವಿದ್ಯಾರ್ಥಿಗಳಲ್ಲಿ 95 ಪುರುಷರು ಹಾಗೂ 83 ಮಹಿಳೆಯರು ಸ್ನಾತಕ ಪದವಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಬಿ.ಎಡ್ ವಿಭಾಗದಲ್ಲಿ ಒಟ್ಟು 472 ವಿದ್ಯಾರ್ಥಿಗಳಲ್ಲಿ 202 ಪುರುಷರು ಹಾಗೂ 270 ಮಹಿಳೆಯರು ಶಿಕ್ಷಣಶಾಸ್ತ್ರದಲ್ಲಿ ಸ್ನಾತಕ ಪದವಿಯನ್ನು ಪಡೆದಿರುತ್ತಾರೆ. ಎಂ.ಕಾo ನಲ್ಲಿ 615 ವಿದ್ಯಾರ್ಥಿಗಳಲ್ಲಿ 220 ಪುರುಷರು ಹಾಗೂ 395 ಮಹಿಳಾ ವಿದ್ಯಾರ್ಥಿಗಳು ಸ್ನಾತ್ತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಎಂ.ಬಿ.ಎ ವಿಭಾಗದಲ್ಲಿ ಒಟ್ಟು 719 ವಿದ್ಯಾರ್ಥಿಗಳಲ್ಲಿ 338 ಪುರುಷರು ಹಾಗೂ 381 ಮಹಿಳಾ ಮಹಿಳೆಯರು ಸ್ನಾತ್ತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ವಿಜ್ಞಾನ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗಗಳಾದ ಬಿ.ಎಲ್.ಐ.ಎಸ್ಸಿ, ಎಂ.ಎಲ್.ಐ.ಎಸ್ಸಿ, ಎಂ.ಎಸ್ಸಿ. ಗಣಕಶಾಸ್ತ್ರ, ಎಂ.ಎಸ್ಸಿ. ರಸಾಯನಶಾಸ್ತ್ರ, ಎಂ.ಎಸ್ಸಿ. ಗಣಿತಶಾಸ್ತ್ರ, ಎಂ.ಎಸ್ಸಿ ಪರಿಸರಶಾಸ್ತ್ರ, ಎಂ.ಎಸ್ಸಿ. ಪರಿಸರ ವಿಜ್ಞಾನ ಮಾಹಿತಿ ವಿಜ್ಞಾನ ಭೂಗೋಳಶಾಸ್ತ್ರ, ಎಂ.ಎಸ್ಸಿ. ಆಹಾರ ವಿಜ್ಞಾನ ಮತ್ತು ಪೌಷ್ಟಿಕತೆ, ಎಂ.ಎಸ್ಸಿ. ಜೀವರಸಾಯನಶಾಸ್ತ್ರ, ಎಂ.ಎಸ್ಸಿ. ಜೈವಿಕ ತಂತ್ರಜ್ಞಾನ, ಎಂ.ಎಸ್ಸಿ. ಭೌತಶಾಸ್ತ್ರ, ಎಂ.ಎಸ್ಸಿ. ಸೂಕ್ಷ್ಮ ಜೀವಶಾಸ್ತ್ರ, ಹಾಗೂ ಎಂ.ಎಸ್ಸಿ. ಮನೋವಿಜ್ಞಾನ ವಿಭಾಗದಲ್ಲಿ ಒಟ್ಟು 1304 ವಿದ್ಯಾರ್ಥಿಗಳಲ್ಲಿ 501 ಪುರುಷರು ಹಾಗೂ 803 ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತ್ತಕೋತ್ತರ ಪದವಿಯನ್ನು ಪಡೆದಿರುತ್ತಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವರಾದ ಡಾ.ಕೆ.ಎಲ್.ಎನ್. ಮೂರ್ತಿ, ಡೀನ್ ಅಕಾಡೆಮಿಯ ಲೀಡರ್ ಲಕ್ಷ್ಮೀ, ಹಣಕಾಸು ಅಧಿಕಾರಿಯಾದ ಡಾ.ರಮೇಶ್  ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸರ್ಕಾರ ದಿವಾಳಿ ಆಗಿದೆ ಅನ್ನೋದು ಸುಳ್ಳು: ಡಿ.ಕೆ.ಸುರೇಶ್

0
ರಾಮನಗರ: ಸರ್ಕಾರ ದಿವಾಳಿ ಆಗಿದೆ ಅನ್ನೋದು ಸುಳ್ಳು, ನಾವು ನಿಮ್ಮ ತೆರಿಗೆಯನ್ನು ನಿಮಗೆ ಕೊಡುತ್ತಿದ್ದು, ಬಡವರನ್ನ ಮೇಲೆ ತರುವ ಕೆಲಸ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಗುರುವಾರ ಬಿಜೆಪಿ ಮತ್ತು ಜೆಡಿಎಸ್...

ವಿತ್ತೀಯ ಶಿಸ್ತು ಪಾಲನೆಯ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಒತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ

0
ಬೆಂಗಳೂರು: ರಾಜ್ಯಕ್ಕೆ 3,71,383 ಕೋಟಿ ರೂ. ಗಾತ್ರದ  ಜನಪರ ಬಜೆಟ್ ಮಂಡಿಸುವ ಮೂಲಕ ವಿತ್ತೀಯ ಶಿಸ್ತು ಪಾಲನೆಯ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಪರಿಷತ್ತಿನಲ್ಲಿ...

ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಬಸವರಾಜ ಬೊಮ್ಮಾಯಿ

0
ಬೆಂಗಳೂರು: ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಹಾಗೂ ಪಾಕಿಸ್ತಾನ ಪರ ಘೋಷಣೆ ಕೂಗುವ ದೇಶದ್ರೋಹಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿ, ವಿಧಾನಸೌಧದದಿಂದ ರಾಜಭವನದವರೆಗೂ ಪಾದಯಾತ್ರೆಯಲ್ಲಿ ಸಾಗಿ,...

ಕೇವಲ ಓಟಿಗಾಗಿ ಸಂವಿಧಾನ ಆಪತ್ತಿ‌ನಲ್ಲಿದೆ ಎಂದು ಗಿಮಿಕ್ ಮಾಡುತ್ತಿದ್ದಾರೆ: ವಿ ಶ್ರೀನಿವಾಸ್ ಪ್ರಸಾದ್

0
ಮೈಸೂರು: ಐಕ್ಯತಾ ಸಮಾವೇಶದಲ್ಲಿ ಸಿದ್ದರಾಮಯ್ಯ ಆವೇಶಪೂರಿತ ಭಾಷಣ ಮಾಡಿದ್ದು ಸಂವಿಧಾನ ಜಾಗೃತಿ ಜಾಥಾನಾ?  ಸಂವಿಧಾನ ಆಪತ್ತಿನಲ್ಲಿಲ್ಲ, ಕಾಂಗ್ರೆಸ್‌ ಪಕ್ಷವೇ ಆಪತ್ತಿನಲ್ಲಿದೆ. ಕೇವಲ ಓಟಿಗಾಗಿ ಸಂವಿಧಾನ ಆಪತ್ತಿ‌ನಲ್ಲಿದೆ ಎಂದು ಗಿಮಿಕ್ ಮಾಡುತ್ತಿದ್ದಾರೆ ಎಂದು ಸಂಸದ...

 ಹರೀಶ್‌ ರಾಜ್‌ ನಟನೆಯ ‘ಪ್ರೇತ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ

0
ಕನ್ನಡದಲ್ಲಿ “ಕಲಾಕಾರ್‌’, “ಗನ್‌’, “ಶ್ರೀಸತ್ಯನಾರಾಯಣ’, “ಕಿಲಾಡಿ ಪೊಲೀಸ್‌’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ನಟ ಕಂ ನಿರ್ದೇಶಕ ಹರೀಶ್‌ ರಾಜ್‌ ಈ ಬಾರಿ “ಪ್ರೇತ’ ಎಂಬ ಹಾರರ್‌ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ...

ಚಕ್ರವರ್ತಿ ಸೂಲಿಬೆಲೆ ಕಲಬುರಗಿ ಜಿಲ್ಲಾ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧ ತೆರವು

0
ಕಲಬುರಗಿ: ಕಲಬುರಗಿ ಜಿಲ್ಲೆಗೆ ಚಕ್ರವರ್ತಿ ಸೂಲಿಬೆಲೆ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಕಲಬುರಗಿ ಹೈಕೋರ್ಟ್ ತೆರವುಗೊಳಿಸಿದೆ. ಚಿತ್ತಾಪುರದಲ್ಲಿಂದು ನಮೋ ಬ್ರಿಗೆಡ್ ಆಯೋಜಿಸಿರುವ ಕಾರ್ಯಕ್ರಮಕ್ಕೆ ತಾಲೂಕ ಆಡಳಿತ ಅನುಮತಿ ನೀಡಿರಲಿಲ್ಲ. ಅಲ್ಲದೇ ಸೂಲಿಬೆಲೆ ಚಕ್ರವರ್ತಿ ಕಲಬುರಗಿ ಜಿಲ್ಲೆಗೆ...

ಲೋಕಸಭೆ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಪ್ರತ್ಯೇಕ ಸ್ಪರ್ಧೆ

0
ಪುತ್ತೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಮಾಡಲಿದ್ದಾರೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ‌ ಕುಮಾರ್ ಮಾರ್ತ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈಗಾಗಲೇ ಬಿಜೆಪಿ ಪಕ್ಷದ ನಾಯಕರಾದ ಯಡಿಯೂರಪ್ಪ, ಸಂತೋಷ್ ಜಿ,...

ಕೆಎಸ್‌ ಆರ್‌ ಟಿಸಿ ಬಸ್ಸಿನಡಿ ಸಿಲುಕಿ ತಾಯಿ- ಮಗಳು ಸಾವು

0
ಉತ್ತರ ಕನ್ನಡ: ಕೆಎಸ್‌ ಆರ್‌ ಟಿಸಿ ಬಸ್ಸಿನಡಿ ಸಿಲುಕಿ ತಾಯಿ- ಮಗಳು ಸಾವನ್ನಪ್ಪಿದ್ದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಂಕಿಯಲ್ಲಿ ನಡೆದಿದೆ. ಸವಿತಾ ರಾಜು ಆಚಾರಿ (40) ಹಾಗೂ ಅಂಕಿತಾ ರಾಜು...

ಕುಡಿದ ನಶೆಯಲ್ಲಿ ಮಗು ಬಿಸಾಡಿದ ತಂದೆ: ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವು

0
ಹುಬ್ಬಳ್ಳಿ: ತಂದೆಯೇ ಕುಡಿದ ನಶೆಯಲ್ಲಿ ಮಗುವನ್ನು ಎತ್ತಿ ಬಿಸಾಡಿದ ಪರಿಣಾಮ ಒಂದು ವರ್ಷದ ಹೆಣ್ಣು ಮಗು ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟ ಘಟನೆ ಇಲ್ಲಿನ ಕಿಮ್ಸ್ ನಲ್ಲಿ ನಡೆದಿದೆ. ಶ್ರೇಯಾ ಮೃತ ದುರ್ದೈವಿ ಮಗುವಾಗಿದ್ದು, ಧಾರವಾಡ...

EDITOR PICKS