ಮನೆ ಅಪರಾಧ ಪ್ರಯಾಣಿಕರ ಬ್ಯಾಗ್ ಕಳ್ಳತನ ಮಾಡಿದ್ದ ಆಟೋ ಚಾಲಕನ ಬಂಧನ

ಪ್ರಯಾಣಿಕರ ಬ್ಯಾಗ್ ಕಳ್ಳತನ ಮಾಡಿದ್ದ ಆಟೋ ಚಾಲಕನ ಬಂಧನ

0

ಬೆಂಗಳೂರು(Bengaluru): ₹ 1.65 ಲಕ್ಷ ನಗದು ಇದ್ದ ಸೇನಾ ಅಧಿಕಾರಿಯೊಬ್ಬರ ಬ್ಯಾಗ್‌ ಕಳ್ಳತನ ಮಾಡಿದ್ದ ಆರೋಪದಡಿ ಆಟೊ ಚಾಲಕನನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರದ‌ ಮೂಡಲಪಾಳ್ಯ ನಿವಾಸಿ ಪವನ್ ಬಂಧಿತ ಆರೋಪಿ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆಟೊ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ₹ 1.65 ಲಕ್ಷ ನಗದು ಹಾಗೂ ಬಟ್ಟೆಗಳ ಸಮೇತ ಎರಡು ಬ್ಯಾಗ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಉತ್ತರ ಭಾರತದ ನಿವಾಸಿಯಾಗಿರುವ ಸೇನೆ ಅಧಿಕಾರಿ, ಅ. 14ರಂದು ಕೆಲಸ ನಿಮಿತ್ತ ನಗರಕ್ಕೆ ಬಂದಿದ್ದರು. ಗಂಗಮ್ಮನ ಗುಡಿ ವೃತ್ತದಿಂದ ಶಾಂತಿನಗರಕ್ಕೆ ಹೋಗಲು ಆರೋಪಿ ಪವನ್ ಆಟೊ ಹತ್ತಿದ್ದರು. ಬಳ್ಳಾರಿ ರಸ್ತೆಯ ಗಂಗೇನಹಳ್ಳಿ ಬಳಿ ಆಟೊ ನಿಲ್ಲಿಸಿದ್ದ ಸೇನಾಧಿಕಾರಿ, ಕುಡಿಯಲು ನೀರು ತರಲೆಂದು ಅಂಗಡಿಗೆ ಹೋಗಿದ್ದರು. ಇದೇ ವೇಳೆಯೇ ಆರೋಪಿ, ಆಟೊ ಸಮೇತ ಪರಾರಿಯಾಗಿದ್ದ ಎಂದು ತಿಳಿಸಿದರು.

ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ: ಚಂದ್ರಾ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣದ ಆರೋಪಿಯಾಗಿದ್ದ ಪವನ್‌ನನ್ನು ಬಂಧಿಸಿ ಐಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಹೊರಬಂದಿದ್ದ ಈತ, ಆಟೊ ಚಾಲನೆ ಮಾಡುತ್ತಿದ್ದ  ಎಂದು ಹೇಳಿದರು.

ಹಿಂದಿನ ಲೇಖನಸಿಐ ನಂದೀಶ್ ಸಾವು ಹೃದಯಾಘಾತವಲ್ಲ, ಕೊಲೆ: ಹೆಚ್.ಡಿ.ಕೆ ಆರೋಪ
ಮುಂದಿನ ಲೇಖನಬಿಜೆಪಿ ಅಧಿಕಾರವಧಿಯಲ್ಲಿ 5ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ ಭಾರತ: ನಳಿನ್ ಕುಮಾರ್ ಕಟೀಲ್