ಮನೆ ಅಪರಾಧ ನಾಪತ್ತೆಯಾಗಿದ್ದ ಉದ್ಯಮಿಯ ಶವ ಟ್ರಾಲಿ ಬ್ಯಾಗ್‌ನಲ್ಲಿ ಪತ್ತೆ

ನಾಪತ್ತೆಯಾಗಿದ್ದ ಉದ್ಯಮಿಯ ಶವ ಟ್ರಾಲಿ ಬ್ಯಾಗ್‌ನಲ್ಲಿ ಪತ್ತೆ

0

ಕೋಝಿಕ್ಕೋಡ್: ನಾಪತ್ತೆಯಾಗಿದ್ದ ಹೋಟೆಲ್ ಉದ್ಯಮಿಯೊಬ್ಬರ ದೇಹದ ಭಾಗಗಳು ಕೇರಳದ ಮಲಪ್ಪುರಂನಲ್ಲಿ ಟ್ರಾಲಿ ಬ್ಯಾಗ್ ನಲ್ಲಿ ಪತ್ತೆಯಾಗಿದೆ.

Join Our Whatsapp Group

ಮೃತರನ್ನು ಹೋಟೆಲ್ ಉದ್ಯಮಿ ಸಿದ್ದಿಕ್(58) ಎಂದು ಗುರುತಿಸಲಾಗಿದೆ.

ಅವರು ಮೇ 18 ರಿಂದ ನಾಪತ್ತೆಯಾಗಿದ್ದರು.

ತಂದೆ ನಾಪತ್ತೆಯಾಗಿದ್ದಾರೆ ಎಂದು ಸಿದ್ದಿಕ್ ಪುತ್ರ ದೂರು ದಾಖಲಿಸಿದ್ಧರು. ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಲಾಯಿತು. ತನಿಖೆಯಲ್ಲಿ ಸಿದ್ದಿಕ್ ಬ್ಯಾಂಕ್ ಖಾತೆಯಿಂದ ಎಟಿಎಂ ಮೂಲಕ ಹಣ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ.

ಹೋಟೆಲ್ ಕೊಠಡಿಯಿಂದ ಹೊರಬರುವಾಗ ಇಬ್ಬರೂ ಎರಡು ಟ್ರಾಲಿ ಬ್ಯಾಗ್‌ಗಳನ್ನು ಹೊತ್ತೊಯ್ದಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೊಲೆ ಮಾಡಿ ಎರಡು ಪ್ರತ್ಯೇಕ ಟ್ರಾಲಿ ಬ್ಯಾಗ್‌ಗಳಲ್ಲಿ ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ ಹಾಕಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ವ್ಯಕ್ತಿಗಳಲ್ಲಿ ಒಬ್ಬರು ಮೃತರ ಹೋಟೆಲ್‌ನಲ್ಲಿ ಉದ್ಯೋಗಿ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಶಂಕಿತ ಮಹಿಳೆ, ಉದ್ಯೋಗಿಯ ಸ್ನೇಹಿತೆ ಎಂದು ಹೇಳಲಾಗಿದೆ.ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ .

ಹಿಂದಿನ ಲೇಖನಸಜ್ಜನರಾವ್ ವೃತ್ತದ ಸತ್ಯನಾರಾಯಣ ಸ್ವಾಮಿ ಸನ್ನಿಧಿ
ಮುಂದಿನ ಲೇಖನಒಲ್ಲದ ಗಂಡನಿಗೆ ನೂರಾರು ಕುಂಟುನೆಪ ಎಂಬಂತಿದೆ ಸರ್ಕಾರದ ನಡೆ: ಮಾಜಿ ಸಿಎಂ ಬೊಮ್ಮಾಯಿ ಟೀಕೆ