ಮನೆ ರಾಷ್ಟ್ರೀಯ ರಹಸ್ಯ ಸಂದೇಶ ಕಳುಹಿಸಲು ಭಯೋತ್ಪಾದಕರು ಬಳಸುತ್ತಿದ್ದ 14 ಮೆಸೆಂಜರ್ ಆ್ಯಪ್ ನಿರ್ಬಂಧಿಸಿದ ಕೇಂದ್ರ

ರಹಸ್ಯ ಸಂದೇಶ ಕಳುಹಿಸಲು ಭಯೋತ್ಪಾದಕರು ಬಳಸುತ್ತಿದ್ದ 14 ಮೆಸೆಂಜರ್ ಆ್ಯಪ್ ನಿರ್ಬಂಧಿಸಿದ ಕೇಂದ್ರ

0

ನವದೆಹಲಿ: ಪಾಕಿಸ್ತಾನದ ಉಗ್ರರಿಗೆ ರಹಸ್ಯ ಸಂದೇಶ ಕಳುಹಿಸಲು ಜಮ್ಮು& ಕಾಶ್ಮೀರದ ಕಣಿವೆ ಪ್ರದೇಶದ ಭಯೋತ್ಪಾದಕ ಗುಂಪುಗಳು ಬಳಸುತ್ತಿದ್ದ 14 ಮೆಸೆಂಜರ್ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.

Join Our Whatsapp Group

ಎನಿಗ್ಮಾ, ಸೇಫ್ವಿಸ್, ವಿಕ್ರ್ಮೆ, ಮೀಡಿಯಾಫೈರ್, ಕ್ರಿಪ್ವೈಸರ್, ಬ್ರಿಯಾರ್, ಬಿಚಾಟ್, ನಂಡ್ಬಾಕ್ಸ್, ಕೊನಿಯನ್, ಐಎಂಒ, ಜಂಗಿ, ಥ್ರೀಮಾ ಎಲಿಮೆಂಟ್ ಮತ್ತು ಸೆಕೆಂಡ್ ಲೈನ್ ಆ್ಯಪ್ ಗಳನ್ನು ನಿಷೇಧಿಸಿದೆ.

ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಈ ಆ್ಯಪ್ ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ನಿರ್ಬಂಧಿಸಲಾಗಿದೆ.

ಆ್ಯಪ್ ಗಳು ಕಣಿವೆಯಲ್ಲಿ ಭಯೋತ್ಪಾದಕ ಕುರಿತಾದ ಪ್ರಚಾರವನ್ನು ಮಾಡುತ್ತಿತ್ತು. ಈ ಆ್ಯಪ್ ಗಳ ಮೂಲಕ ಉಗ್ರರು ರಹಸ್ಯ ಸಂದೇಶಗಳನ್ನು ಕಣಿವೆಯಲ್ಲಿರುವ ತನ್ನ ಕಾರ್ಯಕರ್ತರಿಗೆ ಕಳುಹಿಸುತ್ತಿದ್ದರು ಎಂದು ವರದಿ ತಿಳಿಸಿದೆ.

ಹಿಂದಿನ ಲೇಖನ‘ಪ್ರಜಾ’ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ
ಮುಂದಿನ ಲೇಖನಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳ ಮಾಹಿತಿ