ಮನೆ ರಾಜ್ಯ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳ ಮಾಹಿತಿ

ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳ ಮಾಹಿತಿ

0

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಬಿಜೆಪಿಯು, ಅಧಿಕಾರಕ್ಕೆ ಬಂದರೆ ಪಡಿತರದಲ್ಲಿ 5 ಕೆಜಿ ಅಕ್ಕಿ ಜೊತೆ ಇನ್ನೂ 5 ಕೆಜಿ ಸಿರಿಧಾನ್ಯ ವಿತರಣೆ ವಿತರಣೆ ಮಾಡುವುದಾಗಿ ಹಾಗೂ ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ನೀಡುವ ಭರವಸೆಯನ್ನು ನೀಡಿದೆ.

Join Our Whatsapp Group

ಬೆಂಗಳೂರಿನ ಶಾಂಗ್ರಿ ಲಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಇನ್ನು ಪ್ರಣಾಳಿಕೆಯಲ್ಲಿ ಬಿಜೆಪಿ ಏನೆಲ್ಲ ಭರವಸೆಗಳನ್ನು ನೀಡಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು

  • ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ವಾರ್ಷಿಕ ಮೂರು ಉಚಿತ ಸಿಲಿಂಡರ್‌ ಗ್ಯಾಸ್‌ ವಿತರಣೆ (ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ)
  • ಪ್ರತಿ ವಾರ್ಡ್‌ಗಳಲ್ಲಿ ಅಟಲ್‌ ಆಹಾರ ಕೇಂದ್ರ
  • ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಪ್ರತಿ ದಿನ ಅರ್ಧ ಲೀಟರ್‌ ನಂದಿನಿ ಉಚಿತ ಹಾಲು, ಪ್ರತಿ ತಿಂಗಳು 5 ಕೆಜಿ ಸಿರಿ ಅನ್ನ, ಸಿರಿ ಧಾನ್ಯ ವಿತರಣೆ
  • ಏಕರೂಪ ನಾಗರಿಕ ಸಹಿತೆ ಜಾರಿಯ ಭರವಸೆ
  • ‘ಸರ್ವರಿಗೂ ಸೂರು ಯೋಜನೆ’ಯಡಿ 10 ಲಕ್ಷ ನಿವೇಶನ ಹಂಚಿಕೆ
  • ಒನಕೆ ಓಬವ್ವ ಸಾಮಾಜಿಕ ನ್ಯಾಯನಿಧಿ ಯೋಜನೆ
  • ವಿಶ್ವೇಶ್ವರಯ್ಯ ವಿದ್ಯಾ ಯೋಜನೆ – ಸರ್ಕಾರಿ ಶಾಲೆಗಳ ಅಭಿವೃದ್ಧಿ, ಮೇಲ್ದರ್ಜೆ
  • ಸಮನ್ವಯ ಯೋಜನೆ -ಎಸ್‌ಎಂಇ ಮತ್ತು ಐಟಿಐ ನಡುವೆ ಸಮನ್ವಯ
  • ಐಎಎಸ್‌/ಕೆಎಎಸ್‌/ಬ್ಯಾಂಕಿಂಗ್‌/ಸರ್ಕಾರಿ ಉದ್ಯೋಗಕ್ಕಾಗಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಧನಸಹಾಯ
  • ಮಿಷನ್‌ ಸ್ವಾಸ್ತ್ಯ ಕರ್ನಾಟಕದ ಅಡಿಯಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿ
  • ಹಿರಿಯ ನಾಗರೀಕರಿಗೆ ವಾರ್ಷಿಕ ಉಚಿತ ಮಾಸ್ಟರ್‌ ಹೆಲ್ತ್‌ ಚೆಕಪ್‌
  • ಮುಂದಿನ ತಲೆಮಾರಿಗೆ ಬೆಂಗಳೂರಿನ ಅಭಿವೃದ್ಧಿ
  • ವಿದ್ಯುನ್ಮಾನ ವಾಹನಗಳ ಹಬ್‌ ಆಗಿ ಕರ್ನಾಟಕ ಪರಿವರ್ತನೆ
  • 30 ಸಾವಿರ ಕೋಟಿ ರೂ. ಕೆ ಅಗ್ರಿ ಫಂಡ್‌ ಸ್ಥಾಪನೆ
  • ಕಲ್ಯಾಣ ಸರ್ಕ್ಯೂಟ್‌, ಬನವಾಸಿ ಸರ್ಕ್ಯೂಟ್‌, ಪರಶುರಾಮ ಸರ್ಕ್ಯೂಟ್‌, ಕಾವೇರಿ ಸರ್ಕ್ಯೂಟ್‌, ಗಂಗಾಪುರ ಕಾರಿಡಾರ್‌ ನಿರ್ಮಾಣಕ್ಕೆ 1500 ಕೋಟಿ ರೂ.
  • ಬೆಂಗಳೂರು ಹೊರತು ಪಡಿಸಿ 10 ಲಕ್ಷ ಉದ್ಯೋಗಗಳ ಸೃಷ್ಟಿ
  • ಅಪಾರ್ಟ್‌ಮೆಂಟ್‌ ಓನರ್‌ಶಿಫ್ಟ್‌ ಆಕ್ಟ್‌ ತಿದ್ದುಪಡಿಯ ಭರವಸೆ
  • ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುತ್ತೇವೆ. ಪೂರಕವಾಗಿ, ಚಾಜಿರ್ಂಗ್ ಸ್ಟೇಷನ್‍ಗಳ ಸ್ಥಾಪನೆ, 1,000 ಸ್ಟಾರ್ಟ್ ಅಪ್‍ಗಳಿಗೆ ಪ್ರೋತ್ಸಾಹ, ಹಾಲಿ ಇರುವ ಬಿಎಂಟಿಸಿ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್‍ಗಳಾಗಿ ಪರಿವರ್ತಿಸುತ್ತೇವೆ. ಜತೆಗೆ ಬೆಂಗಳೂರಿನ ಹೊರವಲಯದಲ್ಲಿ ಇಬಿ ಸಿಟಿ ಅಭಿವೃದ್ಧಿಗೊಳಿಸುವುದು.
  • ಮುಂದಿನ 5 ವರ್ಷಗಳಲ್ಲಿ 200 ಮೀನು ಕೃಷಿ ಉತ್ಪಾದನಾ ಕೇಂದ್ರ ಸೇರಿದಂತೆ ಒಂದು ಸಾವಿರ ಕೃಷಿ ಉತ್ಪಾದನೆ ಕೇಂದ್ರಗಳ ಸ್ಥಾಪನೆ
  • ಭಗೀರಥ ಶಪಥ ಯೋಜನೆಯಡಿ ಸಮಗ್ರ ನೀರಾವರಿ ವ್ಯವಸ್ಥೆ
  • ಪ್ರತಿ ಲೀಟರ್​ ಹಾಲಿಗೆ 5ರಿಂದ 7 ರೂ. ಪ್ರೋತ್ಸಾಹಧನ ಹೆಚ್ಚಳ
  • ಪ್ರತಿ ತಾಲೂಕಿನಲ್ಲಿ ಮೊಬೈಲ್​ ಪಶು ಆರೋಗ್ಯ ಕ್ಲಿನಿಕ್ ಆರಂಭ
  • ಉತ್ಪನ್ನ ಸಾಗಿಸುವ ರೈತರಿಗೆ ಉಚಿತ ಬಸ್​ ಟಿಕೆಟ್ ಸೌಲಭ್ಯ
  • ಸೋಲಾರ್ ಪಂಪ್​​ಸೆಟ್​ಗಳನ್ನು ಬಳಸುವ ರೈತರಿಗೆ 80% ಸಬ್ಸಿಡಿ
  • 500 ಕೋಟಿ ರೂ. ಮೊತ್ತದ ‘ಸಾವಯವ ಕೃಷಿ ಮಿಷನ್’​ ಜಾರಿ
  • ಪ್ರತಿ ಜಿಲ್ಲೆಯಲ್ಲಿ ಆಹಾರ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ
  • ಒಂದು ಸಾವಿರ ಕೋಟಿ ಮೊತ್ತದ ಬೆಲೆ ಸ್ಥಿರೀಕರಣ ನಿಧಿ ಸ್ಥಾಪನೆ
  • ನೇಕಾರ ಸಮ್ಮಾನ ಯೋಜನೆಯಡಿ 1.5 ಲಕ್ಷ ನೇಕಾರರಿಗೆ ನೆರವು
  • ನೇಕಾರರಿಗೆ ನೀಡುವ ಧನಸಹಾಯ 2 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಳ
  • ಉದ್ಯೋಗಸ್ಥ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್​
  • ಮೈಸೂರಿನಲ್ಲಿ ಅತಿದೊಡ್ಡ ಪುನೀತ್ ರಾಜ್​ಕುಮಾರ್​ ಫಿಲ್ಮ್​ಸಿಟಿ ಸ್ಥಾಪನೆ
  • ವಿಧವೆಯರ ಮಾಸಿಕ ಪಿಂಚಣಿ 800 ರೂ.ರಿಂದ 2 ಸಾವಿರಕ್ಕೆ ಹೆಚ್ಚಳ
  • ಎಲ್ಲಾ ತಾಲೂಕು ಕೇಂದ್ರಗಳಲ್ಲಿ ‘ಸ್ವದೇಶಿ ಕ್ರೀಡೆ’ ಕಬಡ್ಡಿ ತರಬೇತಿ ಕೇಂದ್ರ
  • ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು 30,000 ಕೋಟಿ ಮೊತ್ತದ ಕೆ-ಅಗ್ರಿ ಫಂಡ್ ಸ್ಥಾಪಿಸುತ್ತೇವೆ.
  • ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣ ಮಾಡುತ್ತೇವೆ.
  • ಕೃಷಿ ಯಾಂತ್ರೀಕರಣಕ್ಕೆ ಒತ್ತು ನೀಡುತ್ತೇವೆ. ಜತೆಗೆ, 5 ಹೊಸ ಕೃಷಿ ಆಧಾರಿತ ಕೈಗಾರಿಕಾ ಕ್ಲಸ್ಟರ್‍ಗಳು ಮತ್ತು 3 ಹೊಸ ಆಹಾರ ಸಂಸ್ಕರಣಾ ಪಾರ್ಕ್‍ಗಳನ್ನು ಸ್ಥಾಪಿಸುತ್ತೇವೆ.
ಹಿಂದಿನ ಲೇಖನರಹಸ್ಯ ಸಂದೇಶ ಕಳುಹಿಸಲು ಭಯೋತ್ಪಾದಕರು ಬಳಸುತ್ತಿದ್ದ 14 ಮೆಸೆಂಜರ್ ಆ್ಯಪ್ ನಿರ್ಬಂಧಿಸಿದ ಕೇಂದ್ರ
ಮುಂದಿನ ಲೇಖನಶೋಭಾ ಕರಂದ್ಲಾಜೆ, ಬಿಎಸ್ ವೈ ಲೀಲಾ ಪ್ಯಾಲೇಸ್ ನಲ್ಲಿ ಭೇಟಿಯಾಗಿದ್ದ ವ್ಯಕ್ತಿ ಯಾರು?:  ಎಂಬಿ ಪಾಟೀಲ್