ಮನೆ ಸುದ್ದಿ ಜಾಲ ಮೈಸೂರು ವಿವಿ ಕುಲಪತಿಗೆ ಕರ್ನಲ್ ಕಮಾಂಡೆಂಟ್ ಗೌರವ

ಮೈಸೂರು ವಿವಿ ಕುಲಪತಿಗೆ ಕರ್ನಲ್ ಕಮಾಂಡೆಂಟ್ ಗೌರವ

0

ಮೈಸೂರು(Mysuru): ಮೈಸೂರು ವಿಶ್ವವಿದ್ಯಾನಿಲಯದ(Mysuru university) ಕುಲಪತಿ(Chancellor) ಪ್ರೊ.ಜಿ.ಹೇಮಂತ್ ಕುಮಾರ್(Prof G.Hemanth kumar) ಅವರಿಗೆ ಪ್ರತಿಷ್ಠಿತ ಕರ್ನಲ್ ಕಮಾಂಡೆಂಟ್ ಗೌರವ ಲಭಿಸಿದೆ.

ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಎನ್ ಸಿಸಿ ಗ್ರೂಪ್‌ ವತಿಯಿಂದ ನಡೆದ ಸಮಾರಂಭದಲ್ಲಿ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರಿಗೆ ಕರ್ನಲ್ ಕಮಾಂಡೆಂಟ್ ನೀಡಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕರ್ನಲ್ ಕಮಾಂಡೆಂಟ್ ಗೌರವದ ಮೂಲಕ ನಮ್ಮ ಸಮಾಜಕ್ಕೆ ಇನ್ನೊಂದು ರೀತಿಯಲ್ಲಿ ಸೇವೆ ಸಲ್ಲಿಸುವ ನನ್ನ ಜವಾಬ್ದಾರಿಯನ್ನು ಹೆಚ್ಚಿಸುವಂತೆ ಈ ಶ್ರೇಣಿ‌ ಸಿಕ್ಕಿದೆ ಎಂದು ಭಾವಿಸಿದ್ದೇನೆ. ಇದು ನನ್ನ ಜೀವನದಲ್ಲಿ ಸ್ಮರಣೀಯ ಘಳಿಗೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯವು ಯಾವಾಗಲೂ ಎನ್‌ಸಿಸಿಯ ಮೂರು ವಿಭಾಗಗಳಿಗೆ ಸರಿಯಾದ ಒತ್ತು ನೀಡಿದೆ. ವಿದ್ಯಾರ್ಥಿ ಸಮುದಾಯದ ಸೇನೆ, ನೌಕಾ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸಬೇಕು. ಎನ್‌ ಎಸ್‌ ಎಸ್ ಮತ್ತು ಎನ್‌ಸಿಸಿ ಎರಡು ಪ್ರಮುಖ ವಿಭಾಗಗಳಾಗಿದ್ದು, ಪ್ರತಿ ವರ್ಷ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಸೆಳೆಯಲಾಗುತ್ತಿದೆ ಎಂದರು.

ನನಗೆ ನೀಡಿದ ಗೌರವದ ಮೂಲಕ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ಎನ್‌ ಸಿಸಿಯನ್ನು ಬಲಪಡಿಸಲು ಮತ್ತು ವಿಸ್ತರಿಸಲು ಪ್ರಯತ್ನಿಸುತ್ತೇನೆ “ಏಕತೆ ಮತ್ತು ಶಿಸ್ತು” ಎಂಬ ಧ್ಯೇಯವಾಕ್ಯವನ್ನು ನಿರಂತರವಾಗಿ ಮನಸ್ಸಿನಲ್ಲಿಟ್ಟುಕೊಳ್ಳುತ್ತೇನೆ. ಜೊತೆಗೆ ವಿದ್ಯಾರ್ಥಿ ಸಮುದಾಯದಲ್ಲಿ ದೊಡ್ಡದಾಗಿ ಬೆಳೆಸಲು ಬದ್ಧನಾಗಿದ್ದೇನೆ ಎಂದರು.

ಮೈಸೂರು ಎನ್ ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಆರ್ ಆರ್ ಮೆನನ್ ಇದೇ ವೇಳೆ ಹಾಜರಿದ್ದರು.

ಹಿಂದಿನ ಲೇಖನಸಚಿವ ಸಂಪುಟ ವಿಸ್ತರಣೆ ವಿಚಾರ: ಕಿರಿಯರಿಗೆ ಅವಕಾಶ ನೀಡಲಿ ಎಂದ ಸಚಿವ ಉಮೇಶ್ ಕತ್ತಿ
ಮುಂದಿನ ಲೇಖನತಮಿಳುನಾಡು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ವೈದ್ಯಕೀಯ ಕೋಟಾ: ಮದ್ರಾಸ್ ಹೈಕೋರ್ಟ್