ಪ್ರಯಾಣಿಕ : ನನ್ನ ಜೆಬಿನೋಳಗೆ ಕೈ ಹಾಕಲು ನಿನಗೆಷ್ಟೋ ಧೈರ್ಯ?!
ಮುನ್ನಾ : ನನಗೆ ಬೆಂಕಿ ಪೆಟ್ಟಿಗೆ ಬೇಕಿತ್ತು….
ಪ್ರಯಾಣಿಕ : ಅದನ್ನು ಬಾಯಿ ಬಿಟ್ಟು ಕೇಳಬೇಕಿತ್ತು.ಜೇಬಿಗೆ ಯಾಕೆ ಕೈ ಹಾಕ್ತೀಯಾ?
ಮುನ್ನಾ : ನನಗೆ ಅಪರಿಚಿತರೊಂದಿಗೆ ಮಾತನಾಡಿ ಅಭ್ಯಾಸವಿಲ್ಲ ಕಂಣ್ರೀ……
ತನ್ನ ಹಳೆ ಸ್ಕೂಟರನ್ನು ತಳ್ಳಿಕೊಂಡು ಹೋಗುತ್ತಿದ್ದ ರಂಗಣ್ಣನನ್ನು ಪುಟ್ಟ ಕೇಳಿದ.
ಪುಟ್ಟ : ಅಂಕಲ್, ಸ್ಕೂಟರನ್ನು ಏಕೆ ತಳಕೊಂಡು ಹೋಗುತ್ತಿದ್ದೀರಾ?
ರಂಗಣ್ಣ : ಆಫೀಸಿಗೆ ಅರ್ಜೆಂಟು ಹೋಗಬೇಕಿತ್ತು ಅದಕ್ಕೆ…..
ವಕೀಲ : ಕಟಕಟೆಯಲ್ಲಿ ನಿಂತಿರುವ ಆರೋಪಿ ನಿನಗೆ ಗೊತ್ತಾ?”
ರಂಗ : ಗೊತ್ತು ಸ್ವಾಮಿ
ವಕೀಲ : ಅವನು ಒಬ್ಬನೇ ಇದ್ದಾಗ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಾನೆ. ಇದು ಸತ್ಯಾನಾ? ”
ರಂಗ : ಹೇಳಕ್ಕಾಗಲ್ಲ ಸ್ವಾಮಿ.ಅವನು ಒಬ್ಬನೇ ಇದ್ದಾಗ ನಾನು ಅವನ ಜೊತೆ ಇರಲ್ಲ.