ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 477 ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್, ಫಸ್ಟ್ ಡಿವಿಶನ್ ಅಸಿಸ್ಟೆಂಟ್ (FDA) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಹುದ್ದೆಯ ಮಾಹಿತಿ:
ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು- 9
ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು- 35
ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು- 86
ವಾಣಿಜ್ಯ ತೆರಿಗೆ ಅಧಿಕಾರಿ- 97
ವಾಣಿಜ್ಯ ತೆರಿಗೆಗಳ ಇನ್ಸ್ ಪೆಕ್ಟರ್- 150
ಪ್ರಥಮ ದರ್ಜೆ ಸಹಾಯಕ (FDA)- 100
ವೇತನ:
ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು- ಮಾಸಿಕ ₹ 74,400-1,09,600
ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು- ಮಾಸಿಕ ₹ 67,550-1,04,600
ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು- ಮಾಸಿಕ ₹ 52,650-97,100
ವಾಣಿಜ್ಯ ತೆರಿಗೆ ಅಧಿಕಾರಿ- ಮಾಸಿಕ ₹ 43,100-83,900
ವಾಣಿಜ್ಯ ತೆರಿಗೆಗಳ ಇನ್ಸ್ ಪೆಕ್ಟರ್- ಮಾಸಿಕ ₹ 33,450-62,600
ಪ್ರಥಮ ದರ್ಜೆ ಸಹಾಯಕ (FDA)- ಮಾಸಿಕ ₹ 27,650- 52,650
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ & ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಮೇಲ್ಕಂಡ ಹುದ್ದೆಗಳಿಗೆ ಶೀಘ್ರದಲ್ಲೇ ನೋಟಿಫಿಕೇಶನ್ ಬಿಡುಗಡೆ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ಮನುಷ್ಯನಿಗೆ ಹಣ ಮುಖ್ಯನಾ?…. ಇಲ್ಲ ಗುಣ ಮುಖ್ಯಾನಾ?……
ನಾಡ ದೇವತೆ…. ಶ್ರೀ ಚಾಮುಂಡೇಶ್ವರಿ…🙏🏻
ನಮ್ಮ ರಾಜ್ಯದ ಭವಿಷ್ಯ ಚಿಂತಾ ಜನಕವಾಗಿದೆ ಪುಗಸಟ್ಟೆ ಕೊಡುವ ಅವಾಂತರ
ನಿಮ್ಹಾನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಅಪ್ಪ ಬರಿಮಾತಲ್ಲ ಊಹೆಗೂ ನಿಲುಕದ ಆಕಾಶ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.