ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಚೊಚ್ಚಲ ಬಾರಿಗೆ ಕಣಕ್ಕಿಳಿದಿರುವ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ ಭರವಸೆಯ ಆರಂಭ ಕಂಡಿದೆ. ಪೆರಂಬೂರ್ ಕ್ಷೇತ್ರದಲ್ಲಿ ಸ್ವತಃ ವಿಜಯ್ ಅವರು ಡಿಎಂಕೆ ಅಭ್ಯರ್ಥಿ ಆರ್.ಡಿ. ಶೇಖರ್ ವಿರುದ್ಧ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.
ಇತ್ತ ಎಕ್ಸಿಟ್ ಪೋಲ್‌ಗಳು ವಿಜಯ್ ಪಕ್ಷಕ್ಕೆ ಉತ್ತಮ ಸ್ಥಾನಗಳ ಭವಿಷ್ಯ ನುಡಿದ ಬೆನ್ನಲ್ಲೇ, ಟಿವಿಕೆ ನಾಯಕತ್ವವು ಶಾಸಕರ ಕುದುರೆ ವ್ಯಾಪಾರದ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಗೆದ್ದ ಅಭ್ಯರ್ಥಿಗಳು ತಕ್ಷಣವೇ ಚೆನ್ನೈನ ಪಣೈಯೂರ್ ಕಚೇರಿಗೆ ವರದಿ ಮಾಡುವಂತೆ ಸೂಚಿಸಲಾಗಿದ್ದು, ‘ರೆಸಾರ್ಟ್ ರಾಜಕೀಯ’ದ ಮುನ್ಸೂಚನೆ ಸಿಕ್ಕಿದೆ.
ಡಿಎಂಕೆ ಮಿತ್ರಪಕ್ಷಗಳು ವಿಜಯ್ ಪ್ರಭಾವವನ್ನು ಲಘುವಾಗಿ ಪರಿಗಣಿಸಿದ್ದರೂ, ಆರಂಭಿಕ ಟ್ರೆಂಡ್‌ಗಳು ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆಯ ಸೂಚನೆ ನೀಡುತ್ತಿವೆ.















