ಮನೆ ದೇವರನಾಮ ನಾರಾಯಣ ನಿನ್ನ ನಾಮದ ಸ್ಮರಣೆ

ನಾರಾಯಣ ನಿನ್ನ ನಾಮದ ಸ್ಮರಣೆ

0

ನಾರಾಯಣ ನಿನ್ನ ನಾಮದ ಸ್ಮರಣೆಯ

ಸಾರಾಮೃತವು ಎನ್ನ ನಾಲಿಗೆಗೆ ಬರಲಿ ||

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟು ಇರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾ ಮಂತ್ರದ ನಾಮವ ||1||

ಸಂತತ ಹರಿ ನಿನ್ನ ಸಾಸಿರ ನಾಮವ
ಅಂತರಂಗದ ಒಳಗಿರಿಸಿ
ಎಂತೋ ಪುರಂದರ ವಿಠಲ ರಾಯನ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಂಗೆ ||2||

ಹಿಂದಿನ ಲೇಖನಚಾಮರಾಜನಗರ: ಭತ್ತ ನಾಟಿ ಮಾಡುತ್ತಿದ್ದ ರೈತ ಸಿಡಿಲು ಬಡಿದು ಸಾವು
ಮುಂದಿನ ಲೇಖನಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸುವ ಯೋಗಾಸನ