ಮನೆ ದೇವರನಾಮ ಸಪ್ತ ಸ್ವರಗಳು ನರ್ತನ ಮಾಡಿವೆ

ಸಪ್ತ ಸ್ವರಗಳು ನರ್ತನ ಮಾಡಿವೆ

0

ಸರಿಗಮ ಸಂಗಮ ಸರಿಗಮ ಪದನೀ

ಸಪ್ತ ಸ್ವರಗಳು ನರ್ತನ ಮಾಡಿವೆ ಶಾರದೆ ವೀಣಾ ನಾದದಲಿ

ಸಾವಿರ ದೀಪವು ಉರಿದೊಲು ತೋರಿದೆ | ಮಾತೆಯ ಮೂಗುತಿ ಮಿಂಚಿನಲಿ ।।

ಜ್ಞಾನ ಜ್ಯೋತಿಯು ಬೆಳಗುತಲಿಹುದು ಜಗದಂಬೆ ನೇತ್ರ ಪ್ರಕಾಶದಿ

ಕರುಣೆಯ ತುಂಗಾ ನದಿಯಾಗಿ ಬಂದಿದೆ ತಾಯಿಯ ಪುಣ್ಯ ಕ್ಷೇತ್ರದಲ್ಲಿ ।।

ಭಕ್ತಿಯು ತುಂಬಿದೆ ಕಣಕಣದಲ್ಲಿ ಶೃಂಗೇರಿಯ ಈ ಮಣ್ಣಿನಲ್ಲಿ

ಭಾವವೇ ಹೂವಾಗಿ ಅರಳಿಹುದಿಲ್ಲಿ ಭಗವತಿ ನಿನ್ನಯ ಸನ್ನಿಧಿಯಲ್ಲಿ ।।

ವೇದವೇ ಜೀವವ ತಳೆದಿಹುದಿಲ್ಲಿ ವಟುಗಳ ಮಂತ್ರ ಘೋಷದಲಿ

ಜೀವೋನ್ಮಾದವು ಹೊಮ್ಮಿಹುದಿಲ್ಲಿ ದರ್ಶನ ಪಡೆದ ಹೃದಯದಲಿ ।।

ಹಿಂದಿನ ಲೇಖನಸಂತೋಷ್ ಆತ್ಮಹತ್ಯೆ: ʼಬಿʼ ರಿಪೋರ್ಟ್’ಗೆ ಪ್ರತಿಭಟನಾ ಅರ್ಜಿ ದಾಖಲಿಸಿದ ಗುತ್ತಿಗೆದಾರನ ಸಹೋದರ
ಮುಂದಿನ ಲೇಖನಪಶ್ಚಿಮೋತ್ಥಾನಾಸನ ಮಾಡುವುದರಿಂದ ಸಾಕಷ್ಟು ಉಪಯೋಗ