ಮನೆ ರಾಜ್ಯ ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಷ್ಟ್ರಪತಿಗಳು

ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಷ್ಟ್ರಪತಿಗಳು

0

ಮೈಸೂರು(Mysuru): ವಿಶ್ವ ವಿಖ್ಯಾತ ಮೈಸೂರು ದಸರಾ 2022ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಅಧಿಕೃತವಾಗಿ ಚಾಲನೆ ನೀಡಿದ ಬಳಿಕ ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಮನಗೆದ್ದರು.

ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಅಧಿಕೃತವಾಗಿ ಚಾಲನೆ ನೀಡಿದ ಅವರು, ನಂತರ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಜನತೆಯ ಕುರಿತು ಕನ್ನಡದಲ್ಲಿಯೇ ಮಾತು ಆರಂಭಿಸಿದರು.

ಚಾಮುಂಡೇಶ್ವರಿ ನನ್ನ ಮನಃ ಪೂರ್ವಕ ನಮಸ್ಕಾರಗಳು. ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಎಂದು ಕನ್ನಡಲದಲ್ಲಿ ಮಾತನಾಡಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು.

ರಾಷ್ಟ್ರಪತಿಗಳ ಕನ್ನಡ ನುಡಿಗೆ ನೆರೆದಿದ್ದ ಜನ ಚಪ್ಪಾಳೆಯ ಮೂಲಕ  ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್, ರಾಜ್ಯಪಾಲರು ಸೇರಿದಂತೆ ಹಲವರಿಗೆ ನಮಸ್ಕಾರ ತಿಳಿಸುವ ಮೂಲಕ ಮಾತು ಆರಂಭಿಸಿದರು.

  • ಟ್ಯಾಗ್ಗಳು
  • dasara
ಹಿಂದಿನ ಲೇಖನಸೆ. 29ಕ್ಕೆ ದಸರಾ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆ
ಮುಂದಿನ ಲೇಖನದುಷ್ಟ ವಿಚಾರ ಬದಿಗಿಟ್ಟು, ಶಿಷ್ಟ ವಿಚಾರ ಮೈಗೂಡಿಸಿಕೊಂಡು ಬಾಳ ಬೇಕಿದೆ: ಸಿಎಂ ಬೊಮ್ಮಾಯಿ