ಮನೆ ಜ್ಯೋತಿಷ್ಯ ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ

0

ಇಂದಿನ ದಿನದ ರಾಶಿ ಭವಿಷ್ಯ ಇಲ್ಲಿದ್ದು, ನಿಮ್ಮ ರಾಶಿ ಭವಿಷ್ಯವನ್ನು ನೋಡಿಕೊಂಡು ದಿನ ಪ್ರಾರಂಭಿಸಿ.

ಮೇಷ ರಾಶಿ

ಈ ದಿನ ನಿಮಗೆ ಆರೋಗ್ಯವಾದ ದಿನ. ಆರೋಗ್ಯದ ವಿಷಯದಲ್ಲಿ ಯಾವ ತೊಂದರೆಯೂ ಇಲ್ಲದ ದಿನ. ಆದರೆ ಮಾನಸಿಕ ಕಿರಿಕಿರಿ ಇರುತ್ತದೆ. ನೀವು ಪ್ರತಿದಿನ ಶ್ರೀ ಸುಬ್ರಹ್ಮಣ್ಯನ ಜಪ ಮಾಡುವುದು ಒಳ್ಳೆಯದು. ಯಾವುದಾದರೂ ಮುಖ್ಯ ನಿರ್ಧಾರಗಳು ತೆಗೆದುಕೊಳ್ಳುವುದಿದ್ದರೆ ಒಂದರೆಡು ದಿನ ಮುಂದೂಡಿ. ಮನೆಯಲ್ಲಿ ಕಲಹಕ್ಕೆ ಅವಕಾಶ ಆಗದಂತೆ ಎಚ್ಚರಿಕೆ ವಹಿಸಿ.

ವೃಷಭ ರಾಶಿ

ಮನಸ್ಸಿಗೆ ಭೀತಿ ಆತಂಕಗಳ ಜೊತೆಗೆ ಧನನಷ್ಟವೂ ಸಂಭವಿಸಬಹುದು. ಓಂ ನಮೋ ಭಗವತೇ ವಾಸುದೇವಾಯ ಮಂತ್ರವನ್ನು ಹೇಳಿಕೊಳ್ಳಿ. ಹೂವು, ಸುಗಂಧ ಹಾಗೂ ವಾಹನ ವ್ಯಾಪಾರಿಗಳಿಗೆ ಶುಭದಿನ. ಮನೆಯಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಶತ್ರುಗಳು ನಿಮ್ಮಿಂದ ದೂರ ಇರುತ್ತಾರೆ. ಸರ್ಕಾರದ ಕೆಲಸಗಳು ಇದ್ದರೆ ಈದಿನ ಪ್ರಯತ್ನ ಮಾಡಬಹುದು.

ಮಿಥುನ ರಾಶಿ

ಬಹುದಿನಗಳ ಆಸೆ ಅಥವಾ ನಿರೀಕ್ಷೆ ಯಾವುದಾದೂ ಇದ್ದರೆ ಅದು ಈ ದಿನ ನೆರವೇರುವ ಶುಭ ಸೂಚನೆ ಸಿಗುತ್ತದೆ. ಕುಟುಂಬ ಸೌಖ್ಯ ಇದೆ. ಕುಟುಂಬದಲ್ಲಿ ಹರ್ಷದಾಯಕ ವಾತಾವರಣ ಇರುತ್ತದೆ. ನಿಮ್ಮ ಮನಸ್ಸಿಗೆ ಈ ದಿನ ವಿನಾಕಾರಣ ಕಸಿವಿಸಿ ಕ್ಲೇಶ ಇರುತ್ತದೆ. ದಿನ ಮುಗಿಯುವ ಹೊತ್ತಿಗೆ ಸಂತೋಷದಾಯಕ ಘಟನೆಯಿಂದ ಮನಸ್ಸಿಗೆ ಸಂತೋಷವಾಗುತ್ತದೆ.

ಕರ್ಕಾಟಕ ರಾಶಿ

ಈ ದಿನ ನಿಮಗೆ ಶುಭ ದಿನ. ನಿಮ್ಮ ವೃತ್ತಿಯಲ್ಲಿ ಈ ದಿನ ಒಂದು ಒಳ್ಳೆಯ ಸಮಾಚಾರ ಕೇಳುತ್ತೀರಿ. ನಿಮ್ಮ ಕೆಲಸಕ್ಕೆ ಹೊಗಳಿಕೆ ಸಿಗಬಹುದು. ಮನಸ್ಸಿಗೆ ವಿನಾ ಕಾರಣ ಭೀತಿ ಆತಂಕ ಇರುತ್ತದೆ. ಆದರೆ ಹೆದರಬೇಡಿ ಅಪಾಯ ಇಲ್ಲ. ಸಂಗಾತಿಯೊಂದಿಗೆ ವಾದ ಮಾಡಲು ಹೋಗಬೇಡಿ. ಮಕ್ಕಳಿಂದ ಬೇಸರವಾಗುವ ಸಂಭವ ಇದೆ. ಈ ದಿನ ನಿಮ್ಮ ಕೈಮೀರಿ ಹಣ ಖರ್ಚಾಗುವ ಸಂಭವ ಇದೆ. ಜಾಗ್ರತೆ ಇರಲಿ.

ಸಿಂಹ ರಾಶಿ

ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತದೆ. ವಿನಾಕಾರಣ ಖರ್ಚು ಅಥವಾ ನಷ್ಟ ಉಂಟಾಗಬಹುದು. ವಾಹನ ಮತ್ತು ಅಲಂಕಾರ ಸಾಮಗ್ರಿಗಳ ವ್ಯಾಪಾರಿಗಳಿಗೆ ಶುಭದಿನ. ಸರ್ಕಾರಕ್ಕೆ ಕೆಲಸ ಮಾಡುವವರು ಈ ದಿನ ಕೊಂಚ ಒತ್ತಡವನ್ನು ಎದುರಿಸಬೇಕು. ಹೊಸ ಯೋಜನೆಗಳಿಗೆ ಈ ದಿನ ಶುಭವಲ್ಲ. ಶುಭಕಾರ್ಯಗಳಿಗೆ ಹಣ ಖರ್ಚಾಗುತ್ತದೆ.

ಕನ್ಯಾ ರಾಶಿ

ಯಾವುದೋ ಒಂದು ಶುಭ ಸುದ್ದಿ ನಿಮ್ಮನ್ನು ಅರಸಿ ಬರುತ್ತದೆ. ಮನಸ್ಸಿಗೆ ಉಲ್ಲಾಸ ಕೊಡುತ್ತದೆ. ದೈಹಿಕವಾಗಿ ಆಯಾಸ ಆಗುವ ದಿನ. ಕೆಲಸದ ಒತ್ತಡವನ್ನು ನಿಯಂತ್ರಣ ಮಾಡಿಕೊಳ್ಳಿ. ಎಲೆಕ್ಟ್ರಾನಿಕ್ಸ್ ಉದ್ಯಮಿಗಳಿಗೆ ಶುಭದಿನ. ಲೆಕ್ಕ/ಅಕೌಂಟ್ಸ್ ಹಾಗೂ ಕಂಪ್ಯೂಟರ್ ಪರಿಣಿತರಿಗೆ ಈ ದಿನ ಲಾಭದಾಯಕ. ಮಾತಿನ ಮೇಲೆ ಗಮನ ಇರಲಿ. ವಿನಾ ಕಾರಣ ನಾಲಿಗೆ ಹದ ತಪ್ಪಿ ಮಾತನಾಡಿ ಕೆಟ್ಟವರಾಗಬೇಡಿ.

ತುಲಾ ರಾಶಿ

ಸಂಗಾತಿಯೊಡನೆ ವಿರಸ. ಧನನಷ್ಟ. ವೃತ್ತಿಯಲ್ಲಿ ಈದಿನ ಪ್ರಗತಿ ಇದೆ. ಸಹೋದ್ಯೋಗಿಗಳಿಂದ ಒಳ್ಳೆಯ ಮಾತು ಕೇಳುತ್ತೀರಿ. ನಿಮಗೆ ಉಪಯೋಗವಾಗುವ ಯಾವುದೋ ವಸ್ತು ನಿಮ್ಮ ಕೈಸೇರುತ್ತದೆ. ಮುಖ್ಯವಾದ ಮಾತುಕತೆ ಇದ್ದರೆ ಮುಂದಕ್ಕೆ ಹಾಕಿ. ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿಕೊಳ್ಳಿ.

ವೃಶ್ಚಿಕ ರಾಶಿ

ಶತ್ರುಗಳಿಂದ ತೊಂದರೆ ಎದುರಾದರೂ ದೈವಾನುಗ್ರಹದಿಂದ ಅದು ನಿವಾರಣೆ ಆಗುತ್ತದೆ. ಆದರೆ ಮನಸ್ಸಿಗೆ ಒಂದು ವಿಧದ ಕಿರಿಕಿರಿ ಇರುತ್ತದೆ. ನಿಮಗೆ ಹಿತವಾದ ಯಾವುದೋ ವಾರ್ತೆಯನ್ನು ಕೇಳುತ್ತೀರಿ. ಆಕಸ್ಮಿಕವಾಗಿ ಹಣ ಸಿಗುತ್ತದೆ. ನೆನೆಗುದಿಗೆ ಬಿದ್ದ ಯಾವುದೋ ಒಂದು ಯೋಜನೆ ಪೂರ್ಣವಾಗುತ್ತದೆ. ಮಕ್ಕಳಿಂದ ಶುಭವಾರ್ತೆ ಇದೆ.

ಧನಸ್ಸು ರಾಶಿ

ಈ ದಿನ ಆರೋಗ್ಯದಲ್ಲಿ ಕೊಂಚಮಟ್ಟಿನ ಏರುಪೇರು ಇದೆ. ಅಂದುಕೊಂಡ ಕೆಲಸಕಾರ್ಯಗಳು ಸುಲಭವಾಗಿ ನೆರವೇರುವುದಿಲ್ಲ. ಮಕ್ಕಳಿಂದ ಈದಿನ ಮನಸ್ಸಿಗೆ ಬೇಸರವಿದೆ. ಪತ್ನಿಯಿಂದ ಬೆಂಬಲ ಇದೆ. ಒತ್ತಡದಿಂದ ದೈಹಿಕ ಆಯಾಸ ಕಿರಿಕಿರಿ ಇರುತ್ತದೆ. ಒಟ್ಟಾರೆಯಾಗಿ ಈದಿನ ನಿಮಗೆ ಮಿಶ್ರಫಲ.

ಮಕರ ರಾಶಿ

ಮಾನಸಿಕ ಒತ್ತಡ ಇದೆ. ಸಹೋದರನಿಂದ ಸಹಾಯಹಸ್ತ ಒದಗಿಬರುತ್ತದೆ. ಬೇಡದ ಆಲೋಚನೆಗಳು ದಿಢೀರ್ ಖರ್ಚು ನಿಮ್ಮನ್ನು ಹೈರಾಣ ಮಾಡುತ್ತದೆ. ದೂರಪ್ರಯಾಣದ ಯೋಗ ಇದೆ. ತಾಯಿ ದುರ್ಗೆಯ ಪ್ರಾರ್ಥನೆ ಮಾಡಿಕೊಳ್ಳಿ. ವೃತ್ತಿಯಲ್ಲಿ ಒತ್ತಡ ಇದೆ. ಗ್ರಹಗಳು ಅನುಕೂಲ ಇಲ್ಲ. ಮುಖ್ಯವಾದ ನಿರ್ಧಾರಗಳು ಈದಿನ ಬೇಡ.

ಕುಂಭ ರಾಶಿ

ಹಣ ಬಂದ ಹಾಗೆಯೇ ಮಾಯವೂ ಆಗುತ್ತದೆ. ದಿಢೀರ್ ಖರ್ಚಿನಿಂದ ಕಂಗೆಡುತ್ತೀರಿ. ಆದರೆ ಮನೆಯಲ್ಲಿ ಹಿತಕರ ವಾತಾವರಣ ಇರುತ್ತದೆ. ನಿಮಗೆ ಲಾಭ ತರುವ ಯಾವುದೋ ವಾರ್ತೆ ನಿಮ್ಮ ಕಿವಿಗೆ ಬೀಳುತ್ತದೆ. ಶತ್ರುಭಯ ಇಲ್ಲ. ನಿಮಗೆ ಗೊತ್ತಿಲ್ಲದ ಮೂಲದಿಂದ ಹಣ/ಸಹಾಯ ಒದಗಿ ಬರುತ್ತದೆ. ಕಚೇರಿಯಲ್ಲಿ ಉಲ್ಲಾಸದಾಯಕ ವಾತಾವರಣ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಇರುತ್ತದೆ.

ಮೀನ ರಾಶಿ

ಹಣದ ಹರಿವು ಈದಿನ ಉತ್ತಮವಾಗಿದೆ. ಆದರೆ ಮನಸ್ಸಿಗೆ ಏನೋ ಹಿಂಸೆ ಅಶಾಂತಿ. ವಾಹನ ಉದ್ಯಮಿಗಳಿಗೆ ಈ ದಿನ ಶುಭದಾಯಕ. ನಿಮ್ಮ ಮಾತಿನಿಂದ ಕೆಟ್ಟಹೆಸರು ಬರುವ ಸಾಧ್ಯತೆ ಇದೆ. ಅನಾವಶ್ಯಕವಾಗಿ ಮಾತನಾಡಬೇಡಿ. ಜಗಳಕ್ಕೆ ಅವಕಾಶ ಕೊಡಬೇಡಿ. ಮನೆಯಲ್ಲೂ ವಾದವಾಗ್ವಾದ ಬೇಡ. ಎಣ್ಣೆ, ಕಬ್ಬಿಣಮತ್ತು ಹತ್ತಿಯ ವ್ಯಾಪಾರಿಗಳಿಗೆ ಈ ದಿನ ಶುಭ.

ಹಿಂದಿನ ಲೇಖನಪಿಎಸ್‌ ಐ ಹಗರಣ: ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಲು ಅಮ್ರಿತ್‌ ಪೌಲ್‌ ನಕಾರ
ಮುಂದಿನ ಲೇಖನಭಾರತೀಯ ರೈಲ್ವೆಯ ಆವಿಷ್ಕಾರ ನೀತಿ ʻರೈಲ್ವೆಗಾಗಿ ಸ್ಟಾರ್ಟ್‌ಅಪ್‌ʼ ಕಾರ್ಯಾಗಾರ