ಮನೆ ಸುದ್ದಿ ಜಾಲ ಡಿಆರ್‌ಡಿಒ ಹೈ-ಪವರ್ ಬಾಂಬ್ ಪರೀಕ್ಷೆ: ಪಂಚಕುಲ

ಡಿಆರ್‌ಡಿಒ ಹೈ-ಪವರ್ ಬಾಂಬ್ ಪರೀಕ್ಷೆ: ಪಂಚಕುಲ

0

ಪಂಚಕುಲ (ಮೇ 30): ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮೇ 31 ರಂದು ಹರಿಯಾಣದ ಪಂಚಕುಲ ಜಿಲ್ಲೆಯ ರಾಮಗಢದಲ್ಲಿ ಅತ್ಯಂತ ಶಕ್ತಿಶಾಲಿ ಬಾಂಬ್ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳಿಗೆ ಪರೀಕ್ಷಾ ಅವಧಿಯಲ್ಲಿ ಮನೆಯೊಳಗೇ ಇರುವಂತೆ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳ ಪರೀಕ್ಷೆಯಲ್ಲಿ ಪರಿಣತಿ ಹೊಂದಿರುವ ಡಿಆರ್‌ಡಿಒದ ಪ್ರಮುಖ ಪ್ರಯೋಗಾಲಯವಾದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯ ಈ ಹೈ-ಪವರ್ ಬಾಂಬ್ ಪರೀಕ್ಷೆಯನ್ನು ನಡೆಸುತ್ತಿದೆ ಎನ್ನಲಾಗುತ್ತಿದೆ.

ಹಾಗೂ 2 ಕಿಲೋಮೀಟರ್ ವ್ಯಾಪ್ತಿ ಅಪಾಯಕಾರಿ ವಲಯ ಡಿಆರ್‌ಡಿಒ ವಿಜ್ಞಾನಿಗಳು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಸ್ಫೋಟವು ಎಷ್ಟು ಶಕ್ತಿಶಾಲಿಯಾಗಿರಲಿದೆ ಎಂದರೆ, ಬಾಂಬ್‌ನ ತೀಕ್ಷ್ಣ ತುಣುಕುಗಳು ಗಾಳಿಯಲ್ಲಿ ಬರೋಬ್ಬರಿ 1.5 ಕಿಲೋಮೀಟರ್‌ಗಳಷ್ಟು ದೂರದವರೆಗೆ ಚಿಮ್ಮುವ ಸಾಧ್ಯತೆ ಇದೆ. ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಸ್ಫೋಟ ನಡೆಯುವ ಸ್ಥಳದ ಸುತ್ತಲಿನ 2 ಕಿಲೋಮೀಟರ್ ವ್ಯಾಪ್ತಿಯನ್ನು ಸ್ಪ್ಲಿಂಟರ್ ಅಪಾಯದ ವಲಯ ಎಂದು ಘೋಷಿಸಿದ್ದಾರೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಈ ವಲಯದೊಳಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸುರಕ್ಷತಾ ಸಲಹೆಗಳು ಮತ್ತು ಹಳ್ಳಿಗಳ ಪಟ್ಟಿ TBRL ತಂತ್ರಜ್ಞಾನ ನಿರ್ದೇಶಕ ಸಿ. ಸರ್ಕಾರ್ ಅವರು ಪಂಚಕುಲ ಜಿಲ್ಲಾಧಿಕಾರಿಗೆ ಕಳುಹಿಸಿರುವ ಅಧಿಕೃತ ಪತ್ರದ ಪ್ರಕಾರ, ಈ ಕೆಳಗಿನ ಗ್ರಾಮಗಳ ನಿವಾಸಿಗಳು ಪರೀಕ್ಷೆಯ ಸಮಯದಲ್ಲಿ ಜಾಗರೂಕರಾಗಿರಬೇಕು ಮತ್ತು ಅನಗತ್ಯ ಓಡಾಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಭಾನು ಮತ್ತು ಬಿಲ್ಲಾ ಗ್ರಾಮಗಳು, ಆಸ್ರೆವಾಲಿ, ನಗ್ಗಲ್, ಮೋಗಿನಂದ್, ಕಿಶನ್‌ಗಢ, ಟಿಎಂವಿ ಕಾಲೋನಿ ಮತ್ತು ರಾಮಗಢ ಮುನ್ಸಿಪಲ್ ವ್ಯಾಪ್ತಿಯ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ.

ಮಾನದಂಡಗಳ ಅಡಿಯಲ್ಲಿ ನಡೆಸಲಾಗುತ್ತಿದ್ದು, ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ಇದರ ನೇರ ಮೇಲ್ವಿಚಾರಣೆ ವಹಿಸಲಿದ್ದಾರೆ. ಇದು ಭಾರತೀಯ ರಕ್ಷಣಾ ವ್ಯವಸ್ಥೆಯ ಬಲವರ್ಧನೆಗಾಗಿ ನಡೆಯುವ ನಿಯಮಿತ ಮತ್ತು ಯೋಜಿತ ಪರೀಕ್ಷೆಯಾಗಿದೆ. ಹೀಗಾಗಿ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ, ಅಧಿಕಾರಿಗಳು ನೀಡುವ ಸುರಕ್ಷತಾ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ವಿನಂತಿಸಲಾಗಿದೆ ಎಂಬುದ್ದಾಗಿ ತಿಳಿದುಬಂದಿದೆ.