ಮನೆ ಆರೋಗ್ಯ ಕಿವಿ ಮೂಗು ಮತ್ತು ಗಂಟಲಿನ ರೋಗಗಳು

ಕಿವಿ ಮೂಗು ಮತ್ತು ಗಂಟಲಿನ ರೋಗಗಳು

0

ಕಿವಿಯಲ್ಲಿ ಗುಗ್ಗೆ :-

ಕಿವಿಯಲ್ಲಿ ಗುಗ್ಗೆ ಇರುವುದೇ ಎಲ್ಲರಿಗೂ ತಿಳಿದ ವಿಷಯ ಕಿವಿಯ ಕರಣ ಪಟಲದ ಹೊರ ಭಾಗದಲ್ಲಿ ಗುಗ್ಗೆ ತಯಾರಾಗುತ್ತದೆ. ಹೊರ ಕಿವಿಯ ಮೂರನೇ ಎರಡು ಭಾಗ ಮೂಳೆಯಿಂದಾಗಿದ್ದರೆ, ಮೂರನೇ ಒಂದು ಭಾಗ ಕಾರ್ಡಿಲೇಜ್ ಭಾಗವಾಗಿರುತ್ತದೆ. ಈ ಕಾಡಿನ ಭಾಗದಲ್ಲಿಯೇ ಗುಂಪಿಗೆ ತಯಾರಾಗುತ್ತದೆ. ಕಾರ್ಡಿಲೇಜ್ ಭಾಗದಲ್ಲಿ ಚರ್ಮ ಕೂದಲ ರಂದ್ರಗಳು ಇರುತ್ತದೆ. ಈ ಕೂದಲ ರಂದ್ರಗಳ ಭಾಗದಲ್ಲಿ ಗುಗ್ಗೆ ತಯಾರಾಗುವ ಗ್ರಂಥಿಗಳು ಇರುತ್ತದೆ. ಈ ಗುಗ್ಗೆ ಕೆಲವರಲ್ಲಿ ಹೆಚ್ಚಿಗೆ ತಯಾರಾದರೆ ಮತ್ತೆ ಕೆಲವರಲ್ಲಿ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.

Join Our Whatsapp Group

ಗುಗ್ಗೆ ಎಂಬುದು ಒಂದು ತೇವವಾಗಿಯೂ, ಮತ್ತೊಂದು ಒಣಗಿದಂತೆಯು ಇರುತ್ತದೆ. ಅವುಗಳಲ್ಲಿ ಬಣ್ಣದಲ್ಲಿ ಕೂಡ ವ್ಯತ್ಯಾಸವಿರುತ್ತದೆ.

ಗುಗ್ಗೆಯಲ್ಲಿ ವಿವಿಧ ಆಮ್ಲಗಳು, ಪ್ಯಾಟಿ ಆಸಿಡ್, ಇಮ್ಯುನೋಗ್ಲೋಬ್ಯುಲಿನ್ಸ್ ಇರುತ್ತದೆ. ಇವು ಹೊರಗಿನಿಂದ ಒಳಕ್ಕೆ ಪ್ರವೇಶಿಸುವ ಬ್ಯಾಕ್ಟೀರಿಯ ರೋಗಗಳನ್ನು ಸಾಯಿಸುತ್ತದೆ.

ಕಿವಿಯ ಸ್ವಚ್ಛತೆ :-

ಗುಗ್ಗೆ ಯಾವಾಗಲೂ ಕಿವಿಯ ಹೊರಕ್ಕೆ ಬರುತ್ತದೆ. ಕಿವಿಯ ಹೊರಭಾಗವನ್ನು ಹತ್ತಿಯಿಂದ ಶುಚಿಗೊಳಿಸಿಕೊಂಡರೆ ಸಾಕು. ಕಿವಿಯ ಒಳಗೆಲ್ಲ ಶುಚಿಗೊಳಿಸುವ ಅಗತ್ಯವೇನಿಲ್ಲ. ಇಯರ್ ಬಡ್ಸ್ ನಿಂದ ಕಿವಿಯ ಒಳಗೆಲ್ಲಾ ತೂರಿಸಿಕೊಳ್ಳುವ ರೂಢಿ ಕೆಲವರಿಗೆ ಇದೆ. ಕಿವಿಯ ಒಳಭಾಗದಲ್ಲಿ ನೀಲಿಮಾ ಎಂಬುದಿರುತ್ತದೆ. ಅದು ಕಿವಿ ಒಳಗೆ ಅನಾವಶ್ಯಕವಾದವುಗಳನ್ನುಹೊರಹಾಕುತ್ತದೆ. ಇಯರ್ ಬಡ್ಸ್ ನಿಂದ ಕಿವಿಯ ಪೊರೆಯತನಕ ಬಲವಾಗಿ ತೂರಿಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಅನಗತ್ಯವಾಗಿ ಒಳಗೆಲ್ಲ ತುರಿಸುವುದರಿಂದ ಕಿವಿಯ ಹೊರ ಭಾಗದ ಗುಹೆಗಳನ್ನು ಮತ್ತಷ್ಟು ಒಳಗೆ ತಳ್ಳಿದಂತಾಗುತ್ತದೆ. ಕಿವಿಯ ಮಕ್ಕಳಿಗೆ ಕಿವಿಯ ಸಂರಕ್ಷಣೆಯ ಬಗ್ಗೆ ಸೂಕ್ತವಾದ ಚಳುವಳಿಕೆ ಮೂಡಿಸಬೇಕಾಗುತ್ತದೆ.

 ಕಿವಿಯಲ್ಲಿ ಗುಗ್ಗೆ ಗಟ್ಟಿಯಾದಾಗ ಕಿವಿ ನೋಯುತ್ತದೆ. ಕೇಳಿಸುವುದು ಕಡಿಮೆಯಾಗುತ್ತದೆ. ಆಗಾಗ ಕಿವಿಯಲ್ಲಿ ಶಬ್ದವಾಗುತ್ತದೆ. ತಲೆಸುತ್ತಿದ್ದಂತಾಗುತ್ತದೆ.

ಕಿವಿಯಲ್ಲಿ ಗುಗ್ಗೆ ಕಟ್ಟಿದಾಗ ವೈದ್ಯರ ಸಲಹೆಯಂತೆ ಅದು ಮೆತ್ತಗಾಗಲು ಹನಿ ಔಷಧಿಯನ್ನು ಹಾಕಬೇಕು. ಕಿವಿಗೆ ಎಣ್ಣೆಯನ್ನು ಹಾಕಬಾರದು ಎಣ್ಣೆ ಹಾಕಿದರೆ ಧೂಳು ಸೇರುವುದೇ ಅಲ್ಲದೆ, ಫಂಗಸ್ ಕೂಡ ಸಿಗುತ್ತದೆ.

ಕಿವಿಯಲ್ಲಿ ಕೀವು :-

ಕೆಲವು ಮಕ್ಕಳಲ್ಲಿ ಕಿವಿಯಲ್ಲಿ ತೀವ್ರವಾದ ನೋವುಇರುತ್ತದೆ. ಜ್ವರವು ಬರುತ್ತದೆ. ಆನಂತರ ಕಿವಿಯ ಪೊರೆ ಹೊಡೆದು ಕಿವು ಸುರಿಯುತ್ತದೆ. ಇಂತಹ ಸ್ಥಿತಿಯನ್ನು ಎಕ್ಯೂಟ್ ಸಪ್ಪೋರೇಟಿವ್ ಅಟೈಟಿಸ್ ಮೀಡಿಯಾ (ಎ ಎಸ್ ಓ ಎಂ) ಎನ್ನುತ್ತಾರೆ. ಕಿವಿಯ ಮಧ್ಯಭಾಗದಲ್ಲಿ ಆಕಸ್ಮಿಕವಾಗಿ, ತೀವ್ರವಾಗಿ ಸೋಂಕಾದಾಗ ಹೀಗಾಗುತ್ತದೆ.  ಕಿವಿಯಲ್ಲಿ ನೋವು ಬಂದಾಗ ಸೂಕ್ತವಾದ ರೋಗನಿರೋಧಕ ಔಷಧಿಗಳನ್ನು ಬಳಸಿದರೆ ಈ ಸಮಸ್ಯೆಗಳು ಪರಿಹಾರವಾಗುತ್ತದೆ; ಕರ್ಣಪಟಲ ರಂದ್ರವಾಗಿರಬಹುದು. ಕೆಲವು ಮಕ್ಕಳಿಗೆ ಕಿವಿ ನೋವು ಬಹಳ ತೀವ್ರವಾಗಿರುತ್ತದೆ. ಅಂತಹ ಸಮಯದಲ್ಲಿ ಕರ್ಣಪಟಾಲಕ್ಕೆ ತೂತು ಮಾಡಿ, ಕೀವನನ್ನು ಹೊರಕ್ಕೆ ತರಬೇಕಾಗುತ್ತದೆ. ಸೋಂಕು ನಿವಾರಣೆಯಾಗಲು ಪೂರ್ತಿ ಕೋರ್ಸ್ ಆಂಟಿಬಯೋಟಿಕ್ ಔಷಧಿಯನ್ನು ಬಳಸಬೇಕಾಗುತ್ತದೆ.

ಕ್ರಾನಿಕ್ ಸಪ್ಪೋರೇಟಿವ್ ಅಟೈಟಿಸ್ ಮೀಡಿಯಾ (ಸಿ.ಎಸ್.ಓ.ಎಂ) :-

ಕೆಲವು ಮಕ್ಕಳಿಗೆ ಸದಾ ಕಿವಿಯಲ್ಲಿ ಕೀವು ಸೋರುತ್ತಿರುತ್ತದೆ. ಹೀಗೆ ಸದಾ ಕೀವುಸುರಿಯಲು ಅವರಲ್ಲಿ ಗಂಟಲಿನಲ್ಲಿ ಕ್ರಾನಿಕ್ ಎಡಿನಾಯ್ಡ್ ಉರಿಯೂತ ಮತ್ತು ಸದಾ ಟ್ರಾನ್ಸಿಲ್ ಕೂಡಿರುತ್ತದೆ. ಇಂಥ ಪ್ರಸಂಗದಲ್ಲಿ ಎಡಿನಾಯ್ಡ್ ಆಪರೇಷನ್, ಟ್ರಾನ್ಸಿಲ್ಸ್ ಆಪರೇಷನ್ ಮಾಡದ ಹೊರತು ದೀರ್ಘಕಾಲದಿಂದ ಕಿವಿಯಲ್ಲಿ ಸುರಿಯುತ್ತಿರುವ ಕೀವನ್ನು ತಡೆಗಟ್ಟಲಾಗದು. ಕಿವಿಯಲ್ಲಿ ಕಿವು ಸುರಿಯುತ್ತಿದ್ದಾಗ ವೈದ್ಯರ ಸಲಹೆಯಂತೆ ಚಿಕಿತ್ಸೆ ಮಾಡಿಕೊಳ್ಳಬೇಕು.

ಹಿಂದಿನ ಲೇಖನಕಾವೇರಿ ಬಿಕ್ಕಟ್ಟು ಚರ್ಚಿಸಲು ದೆಹಲಿಯ ತಾಜ್ಮ ಮಾನ್ ಸಿಂಗ್ ಹೋಟೆಲ್ ನಲ್ಲಿ ನಾಳೆ ಬೆಳಿಗ್ಗೆ ಮಹತ್ವದ ಸಭೆ
ಮುಂದಿನ ಲೇಖನಬೊಮ್ಮಾಯಿ ಅವರ ಸಲಹೆ ಪಾಲಿಸಿದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ: ಡಿ.ಕೆ ಶಿವಕುಮಾರ್