ಮನೆ ಅಪರಾಧ ಬೆಂಗಳೂರಿನ ಹೋಟೆಲ್​ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: 7 ಮಂದಿ ಸಿಬ್ಬಂದಿಗೆ ಗಾಯ

ಬೆಂಗಳೂರಿನ ಹೋಟೆಲ್​ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: 7 ಮಂದಿ ಸಿಬ್ಬಂದಿಗೆ ಗಾಯ

0

ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಹೋಟೆಲ್ನಲ್ಲಿದ್ದ 7 ಮಂದಿ ಸಿಬ್ಬಂದಿ ಗಾಯಗೊಂಡಿರುವ ಘಟನೆ ಇಂದಿರಾನಗರದ ಸಿಎಂಎಚ್ ರಸ್ತೆಯ ನ್ಯೂ ಶಾಂತಿ ಸಾಗರ ಹೋಟೆಲ್ನಲ್ಲಿ ನಡೆದಿದೆ.
ಗ್ಯಾಸ್ ಸೋರಿಕೆಯಿಂದ ಹೋಟೆಲ್ನ ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಹೊಟೆಲ್ ಸಿಬ್ಬಂದಿ ನರಸಿಂಹ (50), ಜಗ್ಗ (52), ಗಂಗಾಧರ (38), ಕೃಷ್ಣ (23), ಕೃಷ್ಣ (54) ಸೇರಿದಂತೆ 7 ಜನರಿಗೆ ಗಾಯವಾಗಿದೆ.
ಗ್ಯಾಸ್ ಲೀಕ್ ಆಗುತ್ತಿದ್ದಂತೆ ಗ್ರಾಹಕರನ್ನ ಹೊಟೆಲ್ ಸಿಬ್ಬಂದಿ ಹೊರಗಡೆ ಕಳಿಸಿದ್ದರು. ಪರಿಶೀಲಿಸುವಷ್ಟರಲ್ಲೇ ಗ್ಯಾಸ್ ಪೈಪ್ ಸ್ಫೋಟಗೊಂಡಿದೆ.
ಸದ್ಯ ಗಾಯಗೊಂಡವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಮೂವರು ಉತ್ತರ ಭಾರತ ಮೂಲದವರಾಗಿದ್ದಾರೆ.
ಅಡುಗೆ ಕೋಣೆಯಲ್ಲಿ ಇನ್ನೂ 6 ಸಿಲಿಂಡರ್ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಲಾಗಿದ್ದು, ಸ್ಥಳಕ್ಕೆ 2 ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ.
ಬೆಂಗಳೂರು ಇಂದಿರಾನಗರದ ಸಿಎಂಎಚ್ ರಸ್ತೆಯ ನ್ಯೂ ಶಾಂತಿ ಸಾಗರ ಹೋಟೆಲ್ನಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಹೋಟೆಲ್ನಲ್ಲಿದ್ದ 7 ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ.

ಹಿಂದಿನ ಲೇಖನವಕೀಲ ಜಗದೀಶ್ ಕೆ.ಎನ್.ಗೆ ಜಾಮೀನು ಮಂಜೂರು
ಮುಂದಿನ ಲೇಖನಐಟಿ ರೇಡ್ ಆದವರಿಗೆ ಬೆಲೆ ಜಾಸ್ತಿ: ಸಿ.ಎಂ.ಇಬ್ರಾಹಿಂ