ಮನೆ ಅಪರಾಧ ಕೋಲಾರ: ಒಂದೇ ನಂಬರ್​​ ನ ಎರಡು ಖಾಸಗಿ ಬಸ್​ ಜಪ್ತಿ ಮಾಡಿದ ಆರ್ ​​ಟಿಒ ಅಧಿಕಾರಿಗಳು

ಕೋಲಾರ: ಒಂದೇ ನಂಬರ್​​ ನ ಎರಡು ಖಾಸಗಿ ಬಸ್​ ಜಪ್ತಿ ಮಾಡಿದ ಆರ್ ​​ಟಿಒ ಅಧಿಕಾರಿಗಳು

0

ಕೋಲಾರ:  ಒಂದೇ ರಿಜಿಸ್ಟ್ರೇಷನ್​ ನಂಬರ್ ​​ನ ಎರಡು ಖಾಸಗಿ ಬಸ್ ​ಗಳನ್ನು ಆರ್ ​​ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್ ಗೆ ಸೇರಿದ ರಸ್ತೆ ಸಾರಿಗೆ ಸಂಸ್ಥೆಯ (ಆರ್.ಟಿ.ಓ) ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಬಸ್ ಗಳು ತಮಿಳುನಾಡಿನ ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್​ಗೆ ಸೇರಿದ್ದಾಗಿದ್ದು, ಒಂದೇ ರಿಜಿಸ್ಟ್ರೇಷನ್​ ನಂಬರ್ ಅನ್ನು ಎರಡು ಬಸ್ ​ಗಳಿಗೆ ಹಾಕಿಕೊಂಡು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ. ಇದೀಗ ಬಸ್ ಗಳನ್ನ ಆರ್ ಟಿ ಓ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಚಿಕ್ಕಮಗಳೂರು: ಶಾಲೆಯ ವಸತಿಗೃಹದಲ್ಲೇ ವಿದ್ಯಾರ್ಥಿ ನೇಣಿಗೆ ಶರಣು
ಮುಂದಿನ ಲೇಖನಕಾನೂನು ಪದವಿಗೆ ತೃತೀಯ ಲಿಂಗಿಗೆ ಪ್ರವೇಶ ನೀಡುವಂತೆ ಎನ್‌ ಎಲ್‌ ಎಸ್‌ ಐಯುಗೆ ಹೈಕೋರ್ಟ್​​ ಸೂಚನೆ