ಮನೆ ಸುದ್ದಿ ಜಾಲ ಹಾವೇರಿ :  ತಮ್ಮನಿಂದ ಅಕ್ಕನ ಕತ್ತು ಸೀಳಿ ಭೀಕರ ಕೊಲೆ , ಅಕ್ರಮ ಸಂಬಂಧ ಶಂಕೆ

ಹಾವೇರಿ :  ತಮ್ಮನಿಂದ ಅಕ್ಕನ ಕತ್ತು ಸೀಳಿ ಭೀಕರ ಕೊಲೆ , ಅಕ್ರಮ ಸಂಬಂಧ ಶಂಕೆ

0

ಹಾವೇರಿ : ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಸ್ವಂತ ತಮ್ಮನೇ ಅಕ್ಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು 29 ವರ್ಷದ ಸುಮಾ ಶಿವಶಂಕರ್ ವನಹಳ್ಳಿ ಎಂದು ಗುರುತಿಸಲಾಗಿದೆ. ಸಂಜು ಕೊಲೆ ಆರೋಪಿ ಎನ್ನಲಾಗಿದೆ. ಸುಮಾ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಎಂದಿನಂತೆ ಸುಮಾ ಶಿಗ್ಗಾವಿ ಪಟ್ಟಣದ ಮೌಲಾಲಿ ಗುಡ್ಡದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದರು. ಈ ವೇಳೆ ಅಂಗನವಾಡಿ ಕೇಂದ್ರಕ್ಕೆ ಬಂದ ಸಂಜು, ಅಕ್ಕನ ಮೇಳೆ ಮಚ್ಚಿನಿಂದ ದಾಳಿ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಆರೋಪಿ ಮಚ್ಚಿನ ದಾಳಿಗೆ ಒಂದು ಕೈ ತುಂಡಾಗಿದ್ದು, ಕುತ್ತಿಗೆ ಸೀಳಿ ಅಪಾರ ಪ್ರಮಾಣದ ರಕ್ತಸ್ರಾವದಿಂದ ಸುಮಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಂಗನವಾಡಿ ಮುಖ್ಯದ್ವಾರದ ಬಳಿಯೇ ರಕ್ತದ ಮಡುವಿನಲ್ಲಿ ಸುಮಾ ಅವರ ಹೆಣ ಬಿದ್ದಿರೋದನ್ನು ಕಂಡು ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ. ಇಂದು ಬೆಳಗ್ಗೆ ಸುಮಾರು 10.15ರ ವೇಳೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಶವವನ್ನು ಮರಣೋತ್ತರ ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.