ಮನೆ ರಾಜ್ಯ ಮೈಸೂರು ಬೆಂಗಳೂರು ಎಕ್ಸ್‌‍‌ಪ್ರೆಸ್‌ವೇನಲ್ಲಿ ವಾಹನ ಪಲ್ಟಿ, ಭಯಾನಕ ದೃಶ್ಯ ಸೆರೆ..!

ಮೈಸೂರು ಬೆಂಗಳೂರು ಎಕ್ಸ್‌‍‌ಪ್ರೆಸ್‌ವೇನಲ್ಲಿ ವಾಹನ ಪಲ್ಟಿ, ಭಯಾನಕ ದೃಶ್ಯ ಸೆರೆ..!

0

ಮಂಡ್ಯ : ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಎಳನೀರು ತುಂಬಿಕೊಂಡು ಹೋಗುತ್ತಿದ್ದ ಪಿಕ್ಅಪ್ ವಾಹನ ಏಕಾಏಕಿ ಪಲ್ಟಿಯಾಗಿದೆ. ಅತೀಯಾದ ಲೋಡ್, ಜೊತೆಗೆ ಅತೀಯಾದ ಬಿಸಿಲಿನ ವಾತಾವರಣದಿಂದ ಪಿಕ್ಅಪ್ ವಾಹನದ ಟೈಯರ್ ಸ್ಪೋಟಗೊಂಡಿದೆ.

ಈ ಪರಿಣಾಮ ಪಿಕ್ ಅಪ್ ವಾಹನದ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಎಳನೀರು ಹೆದ್ದಾರಿಯಲ್ಲಿ ಚೆಲ್ಲಿದೆ. ಅತೀ ವೇಗವಾಗಿ ಬರುತ್ತಿದ್ದ ಇತರ ವಾಹನಗಳು ಸಹ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ. ಈ ಘಟನೆಯ ದೃಶ್ಯ ಕಾರಿನ ಡ್ಯಾಶ್ ಕ್ಯಾಮ್​​ನಲ್ಲಿ ಸೆರೆಯಾಗಿದೆ.