ವಾಷಿಂಗ್ಟನ್ : ಇರಾನ್ ಮೇಲಿನ ಯುದ್ಧದಿಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಮ್ಮ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ‘ಇದು ಕೆಟ್ಟ ಘಳಿಗೆ’ ಎಂದು ಟ್ರಂಪ್ ಬೇಸರ ಹೊರಹಾಕಿದ್ದಾರೆ.
48 ವರ್ಷದ ಡೊನಾಲ್ಡ್ ಟ್ರಂಪ್ ಜೂನಿಯರ್ ಈ ವಾರಾಂತ್ಯದಲ್ಲಿ ಎರಡನೇ ಬಾರಿಗೆ ವಿವಾಹವಾಗಲಿದ್ದಾರೆ. ಬಹಾಮಾಸ್ನಲ್ಲಿ ಬೆಟ್ಟಿನಾ ಆಂಡರ್ಸನ್ ಅವರನ್ನು ವರಿಸಲಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ. ಆದರೆ, ಅದೇ ಸಮಯದಲ್ಲಿ ಟ್ರಂಪ್ ಇರಾನ್ನೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಒಪ್ಪಂದವೊಂದನ್ನು ರೂಪಿಸುತ್ತಿದ್ದಾರೆ.
ನಿಮ್ಮ ಮಗನ ಮದುವೆಯಲ್ಲಿ ಭಾಗವಹಿಸುತ್ತೀರಾ ಎಂದು ಕೇಳಿದ ಪ್ರಶ್ನೆ, ‘ನಾನು ಮದುವೆಗೆ ಹಾಜರಾಗಬೇಕೆಂದು ಅವರು ಬಯಸುತ್ತಾರೆ. ಇದು ಕೇವಲ ಒಂದು ಸಣ್ಣ ಖಾಸಗಿ ವಿಷಯ. ನಾನು ಅದನ್ನು ಮಾಡಲು ಪ್ರಯತ್ನಿಸುತ್ತೇನೆ’ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
‘ನಾನು ಹೇಳಿದೆ, ಇದು ನನಗೆ ಒಳ್ಳೆಯ ಸಮಯವಲ್ಲ. ನನ್ನ ಬಳಿ ಇರಾನ್ ಮತ್ತು ಇತರ ವಿಷಯಗಳಿವೆ. ಯುದ್ಧದಂತಹ ಸನ್ನಿವೇಶದಲ್ಲಿ ನಾನು ಮದುವೆಗೆ ಹೋದರೆ ಮಾಧ್ಯಮಗಳು ಅದನ್ನು ಹೇಗೆ ವರದಿ ಮಾಡುತ್ತವೆ ಎಂಬುದರ ಬಗ್ಗೆ ನನಗೆ ಅರಿವಿದೆ. ಪುತ್ರನ ಮದುವೆ ಚೆನ್ನಾಗಿ ನಡೆಯುತ್ತದೆ ಎಂದು ನಾನು ಭಾವಿಸಿದ್ದೇನೆ’ ಎಂದು ಟ್ರಂಪ್ ಮಾತನಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರು ಕುಟುಂಬದ ಐಷಾರಾಮಿ ರಿಯಲ್ ಎಸ್ಟೇಟ್ ಸಮೂಹವಾದ ದಿ ಟ್ರಂಪ್ ಆರ್ಗನೈಸೇಶನ್ನಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ. ಅವರ ತಂದೆಯ ಬಲಪಂಥೀಯ MAGA ರಾಜಕೀಯ ಕಾರ್ಯಸೂಚಿಯ ಧ್ವನಿ ಪ್ರತಿಪಾದಕರಾಗಿದ್ದಾರೆ.
















