ಐಪಿಎಲ್ 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸೋಲಿನ ಸರಣಿ ಮುಂದುವರೆದಿದೆ. ಸೋಮವಾರ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 228 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿದ್ದರೂ, ಲಕ್ನೋ ಗೆಲುವು ಸಾಧಿಸುವಲ್ಲಿ ಪ್ರಯತ್ನ ವಿಫಲವಾಯಿತು ಎನ್ನಲಾಗಿದೆ. ಇದುವರೆಗೆ ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿರುವ ತಂಡಕ್ಕೆ ಇದು ಸತತ ಆರನೇ ಸೋಲಾಗಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ತಮ್ಮ ಸೋಲಿನ ಹಿಂದಿನ ಕಾರಣಗಳನ್ನು ನಾಯಕ ರಿಷಭ್ ಪಂತ್ ವಿವರಿಸಿದರು. ಆರಂಭದಿಂದಲೂ ಅವರು ಆಕ್ರಮಣಕಾರಿಯಾಗಿ ಆಡಿದರೂ, ಅಂತಿಮವಾಗಿ ಕೆಲವು ರನ್‌ಗಳಿಂದ ಸೋತರು ಎಂದು ಪಂತ್ ಹೇಳಿದ್ದಾರೆ ಎನ್ನಲಾಗಿದೆ.
ಆದರೆ “ನಾವು ಪ್ರಾರಂಭಿಸಿದ ರೀತಿಯನ್ನು ಗಮನಿಸಿದರೆ, ಹೆಚ್ಚಿನ ರನ್ ಗಳಿಸಬೇಕಿತ್ತು. ಆದಾಗ್ಯೂ, ಈ ಪಂದ್ಯದಲ್ಲಿ ನಾವು ಖಂಡಿತವಾಗಿಯೂ ಕೆಲವು ಪಾಸಿಟಿವ್ ವೈಬ್ಸ್ ಕಂಡಿದ್ದೇವೆ. ನಮ್ಮ ಹುಡುಗರು ಸ್ವಾತಂತ್ರ್ಯದಿಂದ ಆಡಿದರು. ಕೊನೆಯಲ್ಲಿ, ಮುಂಬೈ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ನಾವು ಅಂದುಕೊಂಡಿದ್ದಕ್ಕಿಂತ 10 ರಿಂದ 15 ರನ್ಗಳು ಕಡಿಮೆಯಾದವು. ಈ ಪಿಚ್‌ನಲ್ಲಿ, ಒಟ್ಟು 220 ರಿಂದ 230 ರನ್‌ಗಳನ್ನು ಸುಲಭವಾಗಿ ಸಾಧಿಸಬಹುದು. ನಮ್ಮ ಬೌಲರ್‌ಗಳು ಸಾಕಷ್ಟು ಉತ್ತಮವಾಗಿ ಪ್ರದರ್ಶನ ನೀಡಿದರು ಎನ್ನಬಹುದು.
ನಮ್ಮ ತಂಡಕ್ಕೆ ಸ್ವಲ್ಪ ಅದೃಷ್ಟವೂ ಬೇಕು ಅದು ನಾನು ಹೇಳಲು ಬಯಸುವ ಏಕೈಕ ಅಂಶವಾಗಿದೆ. ಅದೃಷ್ಟಒಲಿಯಲು ನಮಗೆ ದೈವಾನುಗ್ರಹ ಬೇಕು ಇದಲ್ಲದೆ, ನಮ್ಮ ಕಡೆಯಿಂದಲೂ ಹೆಚ್ಚಿನ ಪ್ರಯತ್ನದ ಅಗತ್ಯವಿದೆ” ಎಂದು ಪಂತ್ ಹೇಳಿದರು. ಮುಂಬೈ ವಿರುದ್ಧದ ಪಂದ್ಯದಲ್ಲಿ, ನಿಕೋಲಸ್ ಪೂರನ್ (21 ಎಸೆತಗಳಲ್ಲಿ 63; 1×4, 8×6) ಮತ್ತು ಮಿಚೆಲ್ ಮಾರ್ಷ್ (25 ಎಸೆತಗಳಲ್ಲಿ 44; 4×4, 3×6) ಅವರ ಸ್ಫೋಟಕ ಇನ್ನಿಂಗ್ಸ್‌ಗಳಿಂದ ಲಕ್ನೋ ತಂಡ ಕೇವಲ ಎಂಟು ಓವರ್‌ಗಳಲ್ಲಿ 123/1 ರನ್ ಕಲೆಹಾಕಿತ್ತ. ಆ ಸಮಯದಲ್ಲಿ, ತಂಡವು 300 ರನ್‌ಗಳ ಗಡಿಯನ್ನು ದಾಟಿ ಹೊಸ ದಾಖಲೆಯನ್ನು ನಿರ್ಮಿಸಬಹುದು ಎಂದು ತೋರುತ್ತಿತ್ತು.
ಆದರೆ ಕಾರ್ಬಿನ್ ಬಾಷ್ ಒಂದೇ ಓವರ್‌ನಲ್ಲಿ ಪೂರನ್ ಮತ್ತು ಮಾರ್ಷ್ ಇಬ್ಬರನ್ನೂ ಔಟ್ ಮಾಡುವ ಮೂಲಕ ಲಕ್ನೋದ ವೇಗಕ್ಕೆ ಬ್ರೇಕ್ ಹಾಕಿದರು. ಕಳಪೆ ಫಾರ್ಮ್ ಅನ್ನು ಮುಂದುವರಿಸಿದ ನಾಯಕ ಪಂತ್ (15) ಬೇಗನೆ ಔಟಾದರು ಎನ್ನಲಾಗಿದೆ, ಇದರಿಂದಾಗಿ ತಂಡದ ಸ್ಕೋರ್ ಕುಸಿಯಿತು. ರಿಕಲ್ಟನ್ (32 ಎಸೆತಗಳಲ್ಲಿ 83; 6×4, 8×6) ಮತ್ತು ರೋಹಿತ್ ಶರ್ಮಾ (44 ಎಸೆತಗಳಲ್ಲಿ 84; 6×4, 7×6) ಅವರ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ ಮುಂಬೈ 18.4 ಓವರ್‌ಗಳಲ್ಲಿ 229 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು ಎನ್ನುವುದಾಗಿದೆ.

















