ಮನೆ ರಾಜ್ಯ ಜಂಬೂ ಸವಾರಿ ಸಂಪನ್ನ: ನಾಳೆ ದಸರಾ ಗಜಪಡೆಗೆ ಬೀಳ್ಕೊಡುಗೆ

ಜಂಬೂ ಸವಾರಿ ಸಂಪನ್ನ: ನಾಳೆ ದಸರಾ ಗಜಪಡೆಗೆ ಬೀಳ್ಕೊಡುಗೆ

0

ಮೈಸೂರು(Mysuru): ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಯಶಸ್ವಿಗೊಂಡಿದ್ದು, ನಾಳೆ ಗಜಪಡೆಗೆ ಬೀಳ್ಕೊಡುಗೆ ಕಾರ್ಯಕ್ರಮ ಇರಲಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಫ್ ಕರಿಕಾಳನ್,  ಜಂಬೂ ಸವಾರಿ ಯಶಸ್ಸಿಗೆ ಕಾರಣ ನಮ್ಮ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಹಾಗೂ ಮಾವುತರು. ಸುಮಾರು 59  ದಿನಗಳ ಕಾಲ ಆನೆಗಳಿಗೆ ಉತ್ತಮ ತರಬೇತಿ, ತಾಲೀಮು ಕೊಟ್ಟು ಈ ಬಾರಿಯ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ್ದಾರೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದಿಂದ ಎಲ್ಲಾ ಒಳ್ಳೆಯದಾಗಿದೆ ಎಂದರು.

ನಾಳೆ ಗಜಪಡೆಗೆ ಬೀಳ್ಕೊಡುಗೆ:

ಎರಡು ತಿಂಗಳಿಂದ ಅರಮನೆಯಲ್ಲಿ ಬೀಡು ಬಿಟ್ಟಿದ್ದ ಆನೆಗಳನ್ನು ಸ್ವ ಸ್ಥಳಕ್ಕೆ ಕಳಿಸಿಕೊಡಲಾಗುತ್ತದೆ. ನಾಳೆ ಸಾಂಪ್ರದಾಯಿಕ ಪೂಜೆ ಮಾಡಿ ಬಳಿಕ  ಕಳಿಸಿಕೊಡಲಾಗುತ್ತದೆ. ಅರಮನೆಗೆ ಬಂದು ಗಂಡು ಮಗು ಮರಿಗೆ ಜನ್ಮ ನೀಡಿದ್ದ ಲಕ್ಷ್ಮಿ ಮತ್ತು ಮರಿಯಾನೆಯನ್ನು ನಾಳೆ ಬೀಳ್ಕೊಡಲು ನಿರ್ಧರಿಸಲಾಗಿದೆ. ವೈದ್ಯರು ಮತ್ತು ನಮ್ಮ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕಳಿಸುವ ನಿರ್ಧಾರ ಮಾಡಲಾಗಿದೆ ಎಂದು ಡಿಸಿಎಫ್ ಕರಿಕಾಳನ್  ತಿಳಿಸಿದರು.

  • ಟ್ಯಾಗ್ಗಳು
  • dasara
ಹಿಂದಿನ ಲೇಖನಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24*7 ಉಚಿತ ವಿದ್ಯುತ್: ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಇನ್ನೂ ಹತ್ತು ದಿನಗಳು ದಸರಾ ದೀಪಾಲಂಕಾರ ಮುಂದುವರಿಕೆ: ಸಚಿವ ಎಸ್.​ಟಿ.ಸೋಮಶೇಖರ್