ಮನೆ ಉದ್ಯೋಗ ನೌಕರರರ ರಾಜ್ಯ ವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ

ನೌಕರರರ ರಾಜ್ಯ ವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ

0

ನೌಕರರ ರಾಜ್ಯ ವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ವಾಕ್​ ಇನ್​ ಇಂಟರ್​ವ್ಯೂಗೆ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್​ ರೆಸಿಡೆಂಟ್​, ಪಾರ್ಟ್​ ಟೈಮ್​ ಸ್ಪೆಷಲಿಸ್ಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 12 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಗಸ್ಟ್​ 10 ರಂದು ನೇರ ಸಂದರ್ಶನ ನಡೆಯಲಿದೆ.

ಈ ಹುದ್ದೆಗಳನ್ನು 1 ವರ್ಷದ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಲಾಗುತ್ತಿದೆ. ಅಭ್ಯರ್ಥಿಗಳ ಕಾರ್ಯ ಕ್ಷಮತೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ಮಾಡಲಾಗುವುದು. 
ಸಂಸ್ಥೆಯ ಹೆಸರು: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ESIC ಕರ್ನಾಟಕ)
ಹುದ್ದೆ: ಸೀನಿಯರ್​ ರೆಸಿಡೆಂಟ್, ಅರೆಕಾಲಿಕ ತಜ್ಞರು
ಹುದ್ದೆಗಳ ಸಂಖ್ಯೆ: 12
ಉದ್ಯೋಗ ಸ್ಥಳ: ಬೆಂಗಳೂರು
ವೇತನ: 60000 ರೂ. ಪ್ರತಿ ತಿಂಗಳು

ವಯೋಮಿತಿ ಸಡಿಲಿಕೆ: ಕಾರ್ಮಿಕರ ರಾಜ್ಯ ವಿಮಾ ನಿಗಮದ ಕರ್ನಾಟಕ ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ: ವೈದ್ಯಕೀಯ ಫಿಟ್ನೆಸ್, ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 28 ಜುಲೈ 2022
ವಾಕ್-ಇನ್ ದಿನಾಂಕ: 10 ಆಗಸ್ಟ್ 2022 ಬೆಳಗ್ಗೆ 11 ಗಂಟೆಗೆ

ಅಧಿಕೃತ ವೆಬ್‌ಸೈಟ್: esic.nic.in

ಸಂದರ್ಶನ ನಡೆಯುವ ಸ್ಥಳ: ವೈದ್ಯಕೀಯ ಅಧೀಕ್ಷಕರ ಕಚೇರಿ. ಇಎಸ್​ಐಸಿ ಆಸ್ಪತ್ರೆ, ಪೀಣ್ಯ, ಬೆಂಗಳೂರು.

ನೇರ ಸಂದರ್ಶನದ ವೇಳೆ ದಾಖಲೆ ಅವಶ್ಯ

ಎರಡು ಪಾಸಪೋರ್ಸ್​ ಸೈಜ್​ ಫೋಟೋ
ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
ಇತರೆ ಪ್ರಮಾಣ ಪತ್ರಗಳೊಂದಿಗೆ ನೇರ ಸಂದರ್ಶನಕ್ಕೂ 30 ನಿಮಿಷ ಮೊದಲೇ ಹಾಜರಿರಬೇಕು.

ನೇರ ಸಂದರ್ಶನಕ್ಕೆ ನಿಗದಿತ ಅರ್ಜಿ ನಮೂನೆ ನೀಡಲಾಗುವುದು. ಈ ಅರ್ಜಿಯನ್ನು ನೇರ ಸಂದರ್ಶನದ ವೇಳೆ ನೀಡಲಾಗುವುದು. ಇದನ್ನು ಭರ್ತಿ ಮಾಡುವುದು ಕಡ್ಡಾಯ.
12 ಗಂಟೆ ಬಳಿಕ ಬಂದ ಅಭ್ಯರ್ಥಿಗಳಿಗೆ ನೇರ ಸಂದರ್ಶನದಲ್ಲಿ ಭಾಗಿಯಾಗಲು ಅವಕಾಶ ಇರುವುದಿಲ್ಲ.

ಹಿಂದಿನ ಲೇಖನಕಾಮನ್‌ವೆಲ್ತ್ ಕ್ರೀಡಾಕೂಟ: ಕಂಚಿನ ಪದಕ ಗೆದ್ದ ಹರ್‌ಜಿಂದರ್ ಕೌರ್‌
ಮುಂದಿನ ಲೇಖನಮೈದುಂಬಿ ಹರಿಯುತ್ತಿರುವ ಪಯಸ್ವಿನಿ ನದಿ: ಹಲವು ಮನೆಗಳಿಗೆ ನೀರು