ಶಾಮಣ್ಣನವರು: ಎದುರಿಗೆ ಸಿಕ್ಕ ಶೀನಣ್ಣನವರನ್ನು ಮಾತನಾಡಿಸಿ, “ನಿನ್ನ ಮಗಳಿಗೆ ವರ ಸಿಕ್ಕಿದನೇನಯ್ಯಾ?” ಕೇಳಿದರು.
ಶೀನಣ್ಣ: “ಇನ್ನೂ ಸಿಕ್ಕಿಲ್ಲ ಪ್ರಯತ್ನ ಮುಂದುವೆರೆದಿದೆ.”
ಶಾಮಣ್ಣ: “ಗಂಡು ಹೇಗೆ ಇರಬೇಕು?”
ಶೀನಣ್ಣ: “ಮಗಳಿಗೆ ತಕ್ಕ ವರ ಆಗಬೇಕು. ಆಂದರೆ ಒಂಟಿ ಕಣ್ಣು ಗೂನು ಬೆನ್ನು, ಸೊಟ್ಟ ಕಾಲಿನ ಹುಡುಗ ಇದ್ದರೆ ಪತ್ತೆಮಾಡಿ ತಿಳಿಸು.”
***
ಶೀನಣ್ಣ: “ನನ್ನನ್ನು ಏನೆಂದು ತಿಳಿದೆ? ನಾನು ಆಫೀಸಿನಲ್ಲಿ ಸಿಂಹ, ಸಿಂಹ ಕಣಯ್ಯಾ!”
ಶಾಮಣ್ಣ: “ಹಾಗಾದರೆ ಮನೇಲಿ?”
ಶೀನಣ್ಣ: “ಮನೆಯಲ್ಲೂ ಸಿಂಹನೇ; ಆದರೆ ಸಿಂಹದ ಮೇಲೆ ದುರ್ಗಿಕುಳಿತಿರುತ್ತಾಳೆ!”
***
“ಕರಿಯ ಬೆಕ್ಕು ಆಡ್ಡ ಬಂದರೆ ಶಕುನ ಒಳ್ಳಯದೆ ಪಂಡಿತರೇ ?” ಶಾಮಣ್ಣ ಕೇಳಿದ.
ಪಂಡಿತರು: “ಇದಕ್ಕೆ ಉತ್ತರ ಬಹಳ ಸುಲಭ. ನೀನು ಮನುಷ್ಯನೋ ಇಲ್ಲವೆ ಇಲಿಯೋ ಎಂಬುದನ್ನು ಅವಲಂಬಿಸಿದೆ!”














