ನಿಂಗ : ಮದುವೆಯಾದ ಮೇಲೆ ನಮ್ಮ ಸಂಸಾರದಲ್ಲಿ ಆದ ಮುಖ್ಯ ಬದಲಾವಣೆ ಏನು?
ರಾಜ : ತುಂಬಾ ಸಿಂಪಲ್ ನನ್ನ ಹೆಂಡತಿ ಅಡುಗೆ ಮಾಡುವುದು ಮರೆತುಬಿಟ್ಟಳು, ನಾನು ಅಡುಗೆ ಮಾಡೋದು ಕಲಿತೆ.
***
ಹುಚ್ಚರಿಬ್ಬರು ಮಾತನಾಡುತ್ತಿದ್ದರು.
ಮೊದಲನೇ ಹುಚ್ಚು : ಲೋ ನೋಡ್ತಾ ಇರು, ಸದ್ಯದಲ್ಲೇ ನಾನು ಭಾರತದ ಪ್ರಧಾನಮಂತ್ರಿ ಆಗ್ತೀನಿ.
ಎರಡನೇ ಹುಚ್ಚ : ಅದು ಸಾಧ್ಯವಿಲ್ಲ.
ಮೊದಲನೇ ಹುಚ್ಚ : ಏಕೆ ಸಾಧ್ಯವಿಲ್ಲ?
ಎರಡನೇ ಹುಚ್ಚ : ನಾನು ಆ ಸ್ಥಾನಕ್ಕೆ ರಾಜೀನಾಮೆ ನೀಡಲು ತಯಾರಿಲ್ಲ.
***
ಪ್ರಯಾಣಿಕ : ವೇಳಾಪತ್ರಿಕೆಯ ಪ್ರಯೋಜನವೇನು ? ವೇಳೆಗೆ ಸರಿಯಾಗಿ ಬಸ್ಸು ಬರದಿದ್ದರೆ ?
ನಿಲ್ದಾಣ ಅಧಿಕಾರಿ : ವೇಳೆಗೆ ಸರಿಯಾಗಿ ಬಸ್ಸು ಹೊರಡಲಿಲ್ಲವೆನ್ನುವುದು ಹೇಗೆ ಗೊತ್ತಾಗುವುದು, ವೇಳಾಪತ್ರಿಕೆ ಇಲ್ಲದಿದ್ದರೆ ?
***
ಜಗ್ಗು : ಕರೆಂಟ್ ಹೋದ ನಂತರಾನೂ ಸ್ವಲ್ಪ ಹೊತ್ತು ಉರಿಯುತ್ತಿರುವಂತಹ ಒಂದು ಬಲ್ಬ್ ಕೊಡಿ.
ಅಂಗಡಿಯವ : ಅದು ಯಾವ ರೀತಿ ಬಲ್ಬ್ ?
ಜಗ್ಗು : ಕರೆಂಟ್ ಹೋದ್ರೂ ಫ್ಯಾನ್ ಸ್ವಲ್ಪಹೊತ್ತು ಸುತ್ತುತ್ತಲ್ಲ ಹಾಗೆ !
***
“ನನ್ನ ಮಗಳನ್ನು ಕಿಡ್ನಾಪ್ ಮಾಡಿದ್ದು ಅಲ್ದೆ, ನನಗೆ ಮದುವೆ ಇನ್ವಿಟೇಶನ್ ಕಳಿಸಿದ್ದಾನೆ. ಅಯೋಗ್ಯ” ರಾಮಣ್ಣ ರೇಗಾಡಿದ.
“ನೀನು ಏನ್ ಮಾಡ್ದೆ”
“ಬಿಡ್ತೀನಾ? ಹೋದೆ. ಹೋಗಿ ಊಟ ಮಾಡ್ಕೊಂಡು ಬಂದೆ.”
***
ಮಹಿಳೆ : ಹಲೋ…. ಇದು ಪೊಲೀಸ್ ಸ್ಟೇಷನ್ನ…. ಸರ್, ನನ್ನ ಗಂಡ ತರಕಾರಿ ತರ್ತೀನಿ ಅಂತ ಹೋದವರು ಇನ್ನೂ ಬಂದಿಲ್ಲ ನಾನೇನು ಮಾಡಲಿ ಸರ್ ?
ಇನ್ಸ್ಪೆಕ್ಟರ್ : ಇವತ್ತೊಂದಿನ ಬರೀ ತಿಳಿಸಾರು ಮಾಡ್ಕೊಂಡು ಊಟ ಮಾಡಮ್ಮ.