ಕಿಟ್ಟು : ಯಾಕೋ ರಾಜು ಇವತ್ತು ತುಂಬಾ ಮಂಕಾಗಿದ್ದೀಯಾ ?
ರಾಜು : “ನಾಳೆ ನಮ್ಮನೇಲಿ ಯಾರು ಇರೋದಿಲ್ಲ ಖಂಡಿತ ಬನ್ನಿ” ಅಂತ ನನ್ನ ಲವರ್ ಫೋನ್ ಮಾಡಿದ್ಲು.
ಕಿಟ್ಟು : ಇದು ಸಂತೋಷದ ಸಮಾಚಾರ ತಾನೇ ?
ಕಿಟ್ಟು :ನಿನಗೆ ಸಂತೋಷ ಅಷ್ಟೇ. ಇವತ್ತು ಮನೆಗೆ ಹೋದ್ರೆ ಯಾರು ಇರಲಿಲ್ಲ ಮನೆಗೆ ಬೇಗ ಹಾಕಿತ್ತು.
***
ಪರೀಕ್ಷಕ : (ಪ್ರಾಣಿ ಶಾಸ್ತ್ರದ ಬಗ್ಗೆ ರಾಜುಗೆ ಪ್ರಶ್ನೆ ಕೇಳುತ್ತಿದ್ದರು) ಇದೇನು ನೋಡು ?
ರಾಜು : ಅದು ಯಾವುದೋ ಪಕ್ಷಿಕಾಲಿನಂತಿದೆ
ಪರೀಕ್ಷಕ : ಸರಿಯಾಗಿ ಹೇಳಿದೆ. ಇದು ಯಾವ ಪಕ್ಷಿ ಕಾಲು ಸರಿಯಾಗಿ ನೋಡಿ ಹೇಳು ?
ರಾಜು : ನನಗೆ ಗೊತ್ತಾಗ್ತಾ ಇಲ್ಲ ಸರ್.
ಪರೀಕ್ಷಕ : ಹಾಗಾದರೆ ಈ ವಿಷಯದಲ್ಲಿ ನೀನು ಫೇಲಾದೆ. ಅಂದಹಾಗೆ ನಿನ್ನ ಹೆಸರೇನು ?
ರಾಜು : ನನ್ನ ಕಾಲು ನೋಡಿ ನೀನೇ ನನ್ನ ಹೆಸರು ತಿಳ್ಕೋಬೋದಲ್ಲ.
***
ಗೀತಾ : ಇವತ್ತೇನಾಗುತ್ತೋ ನಾನು ನೋಡ್ತೀನಿ, ನಮ್ಮಮ್ಮನ ಮನೆಗೆ ಹೋಗೆ ಹೋಗ್ತೀನಿ.
ರಾಜು : ನೋಡು ನೋಡು, ನನ್ನ ಕೆರಳಿಸಬೇಡ, ಸಿಟ್ಟು ಬಂದರೆ ನಾನು ಮನುಷ್ಯನಾಗಿರಲ್ಲ.
ಗೀತಾ : ಕಂಡಿದ್ದೀನಿ ಸುಮ್ನಿರಿ, ಬೆಕ್ಕಿನ ಮರಿಗೆ ಹೆದರೋಳಲ್ಲ ನಾನು.
***
ರಾಜು : ಡಿಯರ್, ನೀನ್ನೊಂದು ಪ್ರಶ್ನೆ ಕೇಳಲಾ ?
ಗೀತಾ : ಕೇಳಿ.
ರಾಜು : ನನಗೆ ಸಂತೋಷ ಮತ್ತು ದುಃಖ ಒಂದೇ ಬಾರಿ ಆಗುವಂತಹ ಒಂದು ಮಾತು ಹೇಳು.
ಗೀತಾ : ನಿಮ್ಮ ಸ್ನೇಹಿತರಿಗಿಂತ ನೀವೇ ನನಗೆ ಚೆನ್ನಾಗಿ ಮುತ್ತೀಡುತ್ತೀರಿ.