ಕಿಟ್ಟು : ಪಾರ್ವತಿ ಕಂಪ್ಯೂಟರ್ ಕ್ಲಾಸಿಗೆ ಹೋಗ್ತಾ ಇದ್ಲು.
ರಾಜು : ಅದೇ ಕೊನೆ ಉಬ್ಬಲ್ಲು ಪಾರ್ವತಿ ತಾನೇ ?
ಕಿಟ್ಟು : ಅಲ್ಚೋ, ಪರಶಿವನ ಹೆಂಡ್ತಿ ಪಾರ್ವತಿ ಆದರೆ ಕಂಪ್ಯೂಟರ್ ಪರೀಕ್ಷೆಯಲ್ಲಿ ಪಾಸ್ ಮಾಡಿಲ್ಲ, ಏಕೆ ?
ರಾಜು : ಮಗ ಗಣೇಶ ಮೌಸ್ ತಗೊಂಡು ಹೋಗಿರಬೇಕು.
**
ರಾಜು : ನಿನ್ನ ಜೊತೆ ಸಂಸಾರ ಮಾಡೋರು ಯಾರು ಗೊತ್ತೇ ?
ಗೀತಾ : ಯಾರು?
ರಾಜು : ನಿನ್ನ ಜೊತೆ ಸಂಸಾರ ಮಾಡೋನು ಕತ್ತೆಗೆ ಸಮಾನ.
ಗೀತಾ : ಈಗ ನನಗೆ ಅರ್ಥವಾಯಿತು. ಇಷ್ಟು ದಿನ ನಾನು ಯಾರೊಂದಿಗೆ ಸಂಸಾರ ಸಾಗುಸ್ತಾ ಇದೀನಿ ಅಂತ.
***
ಶಿಕ್ಷಕ : ರಾಜು, ನಿನ್ನ ತಂದೆ ಹೆಸರೇನು?
ರಾಜು : ಚರಂಡಿ.
ಶಿಕ್ಷಕ : ಏನು ತಮಾಷೆ ಮಾಡ್ತೀಯಾ? ಸರಿಯಾಗಿ ಹೇಳು ?
ರಾಜು : ಸರಿಯಾಗಿ ಹೇಳ್ತಾ ಇದ್ದೀನಿ ಸರ್, ಚರಣ್.ಡಿ ಅಂತ.