ಪೋಲಿಸ್ : ನಿನ್ನ ಮಿತ್ರ ಬಷೀರ್ ಹೇಗೆ ಸತ್ತಾ?
ರಾಜು : ನನ್ನ ಹೊಟ್ಟೆಲಿ ಇಲಿ ಓಡಾಡ್ತಾ ಇದೆ ಅಂತ ಹೇಳಿದ.
ಪೊಲೀಸ್ : ಅದಕ್ಕೆ ನೀನೇನು ಮಾಡಿದೆ ?
ರಾಜು : ಇಲಿ ಸಾಯ್ಲೀ ಅಂತ ಇಲಿ ಪಾಷಾಣ ಕೊಟ್ಟೆ. ಇಲಿ ಸಾಯ್ಲಿಲ್ಲ. ಇವನೇ ಸತ್ಯ ಅಷ್ಟೇ.
****
ತಂದೆ : ಏನು ಮಗನೇ ನಿನಗೆ ಸ್ವಲ್ಪನೂ ಬುದ್ಧಿ ಇಲ್ವಲ್ಲೋ
ಮಗ : ಏನೇ ಆಗಲಿ ನಾನು ನಿನ್ನ ಮಗನೇ ಅಲ್ವೇನಪ್ಪಾ.
****
ಮ್ಯಾನೇಜರ್ : ನಿನಗೊಂದು ಪ್ರಶ್ನೆ ಕೇಳಲಾ ?
ರಾಜು : ಕೇಳಿ ಬಾಸ್
ಮ್ಯಾನೇಜರ್ : ಈಗ ನೀನು ನಿಮ್ಮ ಕಚೇರಿ ಜವಾನನಾಗಿ ಕೆಲಸ ಮಾಡ್ತಾ ಇದ್ದೀಯ. ನಾನು ನಿನಗೆ ಮ್ಯಾನೇಜರ್ ಆಗಿದ್ದೀನಿ. ಒಂದು ವೇಳೆ ನೀನು ಮ್ಯಾನೇಜರ್ ಆಗಿ ನಾನು ಜವಾನನಾದರೆ ಏನು ಮಾಡುತ್ತೀಯಾ ?
ರಾಜು : ಮೊದ್ಲು ಜವಾನನ್ನ ಬದಲಿಸುತ್ತೇನೆ ಅಷ್ಟೇ.
Saval TV on YouTube