ಕಿಟ್ಟು : ಸಾಧ್ಯವಿಲ್ಲಾ ಅನ್ನೋ ಪದ ನನ್ನ ಡಿಕ್ಷನರಿಯಲ್ಲಿ ಇಲ್ಲ.
ರಾಜು : ಅದ್ನ ಈಗ ಹೇಳಿ ಏನು ಪ್ರಯೋಜನ ?
ಕಿಟ್ಟು : ಯಾಕೆ ?
ರಾಜು : ಡಿಕ್ಷನರಿ ತೆಗೆದುಕೊಳ್ಳೋಕೆ ಮುಂಚೆ ಚನ್ನಾಗಿ ನೋಡಿ ತಗೋಬೇಕಿತ್ತು.
****
ರಾಜು : ಸಾರ್ ನನ್ನ ಹೆಂಡ್ತಿನ ಯಾರು ಹೊಡ್ಕೊಂಡು ಹೋಗಿದ್ದಾರೆ.
ತಹಶೀಲ್ದಾರ : ಇದು ತಾಲೂಕ್ ಆಫೀಸ್ ಕಣಯ್ಯ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಡು.
ರಾಜು : ನನಗಾಗ್ತಿರೋ ಸಂತೋಷದಲ್ಲಿ, ಏನು ಮಾಡಬೇಕು ಅಂತಾನೇ ತೋಚ್ತಾ ಇಲ್ಲ.















