“ರೀ, ಇಂದಿನ ಪತ್ರಿಕೆಯಲ್ಲಿರುವ ಸುದ್ದಿ ನೋಡಿ. 75 ವರ್ಷದ ವ್ಯಕ್ತಿ 25 ವರ್ಷದ ಯುವತಿಯನ್ನು ಮದುವೆ ಆದನಂತೆ!”
“ ಅವನಿಗೆ ಬುದ್ಧಿ ಕೆಟ್ಟಿರಬೇಕು ಬಾಳಿನ ಮುಕ್ಕಾಲು ಭಾಗ ಬುದ್ಧಿವಂತ ಆಗಿದ್ದವನು ಕೊನೆಯ ಅವಧಿಗೆ ಹೀಗೇಕೆ ಮೂರ್ಖನಾದ!!”
ಗುರುಗಳು: ಕಾಗೆ ಗೊಂಬೆಯ ಮೇಲೆ ಬಂದು ಕೂಡುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಹೋಯಿತು. ಇದಕ್ಕೆ ‘ಕಾಕತಾಳೀಯ’ ಎನ್ನುತ್ತಾರೆ. ಇಂತಹುದೇ ಇನ್ನೊಂದು ಉದಾಹರಣೆ ಕೊಡು.’
ಶಿಷ್ಯ : ನನ್ನ ತಂದೆ ಹಾಗೂ ತಾಯಿ ಇವರ ಮದುವೆ ಒಂದೇ ದಿನ, ಒಂದೇ ಕಡೆಗೆ ಒಂದೇ ಸಮಯದಲ್ಲಿ ನಡೆಯಿತಂತೆ!’
ಶಸ್ತ್ರಚಿಕಿತ್ಸೆಗೆ ತೆರಳುವ ಮೊದಲು ಡಾಕ್ಟರರು ಒಂದು ಹೂವಿನ ಹಾರ ತರಲು ಹೇಳಿದರು. ರೋಗಿ ವಿಚಾರಿಸಿದ ಆಪರೇಷನ್ ಗೆ ಹೂವಿನ ಹಾರ ಏಕೆ
ಡಾಕ್ಟರ್ ಹೇಳಿದ “ಇದು ನಾನು ಮಾಡುವ ಮೊದಲನೇ ಆಪರೇಷನ್ ಯಶಸ್ವಿಯಾದರೆ ನನಗೆ, ಇಲ್ಲವಾದರೆ ನಿನಗೆ.”