ಶಿಕ್ಷಕ : ವಾಸು ನಿನ್ನ ತಂದೆಯ ಹೆಸರೇನು?
ವಾಸು : ನನ್ನ ತಂದೆ ಹೆಸರು ಇಂಗ್ಲೀಷಿನಲ್ಲಿ ಹೇಳಲಾ?
ಶಿಕ್ಷಕ : ಇಂಗ್ಲಿಷಿನಲ್ಲಿ ಹೇಳಿದರೇನು? ಕನ್ನಡದಲ್ಲಿ ಹೇಳಿದರೇನು ಹೆಸರಲ್ಲಾ ಒಂದೇತಾನೇ?
ವಾಸು : ಹಾಗೇನಿಲ್ಲ ನನ್ನ ತಂದೆ ಹೆಸರು ಇಂಗ್ಲೀಷಿನಲ್ಲಿ “ಕಮ್ ಕಲರ್”
ಶಿಕ್ಷಕ : ಹಾಗಂದ್ರೇನೋ?
ವಾಸು : ಕಂ ಅಂದ್ರೆ ಬಾ,ಕಲ್ಲರ್ ಅಂದ್ರೆ ಬಣ್ಣ, ಬಾಬಣ್ಣ.
****
ಮ್ಯಾನೇಜರ್ : ಕ್ಯಾಷಿಯರ್ ಎಲ್ರಿ?
ಲೆಕ್ಕಿಗ : ರೈಸ್ ಗೆ ಹೋಗಿದ್ದಾರೆ
ಮ್ಯಾನೇಜರ್ : ಕಚೇರಿ ವೇಳೆಲಿ
ಹೇಗ್ರಿ ಹೋದರು?
ಲೇಕ್ಕಿಗ : ಬುಕ್ ಬ್ಯಾಲೆನ್ಸ್ ಸರಿ ಮಾಡೋಕ್ಕೆ ಇದು ಕಡೆ ಅವಕಾಶ ಅಂತ
****
ಮಗಳನ್ನು ಡಾಕ್ಟರ್ ಹತ್ತಿರ ಕರೆದುಕೊಂಡು ಬಂದ ಒಬ್ಬನು “ಇವನು ಟೇಜರಿ ಕಿವಿ ಕೈ ನುಂಗಿದ್ದಾನೆ” ಎಂದು ಹೇಳಿದ. ಯಾವಾಗ ಎಂದು ಕೇಳಿದಕ್ಕೆ ತಿಂಗಳಾಯಿತು ಎಂದ. ಮತ್ತೆ ಇಷ್ಟು ದಿನ ಏಕೆ ಸುಮ್ಮನಿದ್ದಿರಿ ಎಂದು ಡಾಕ್ಟರ್ ಕೇಳಿದಕ್ಕೆ ಡುಪ್ಲಿಕೇಟ್ ಕೀಲಿ ಕೈ ಮಾಡಿಸಿದ್ದೆವು. ಈಗ ಅದು ಕಳೆದಿದೆ ಎಂದು ಆತ.