ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಟೀಚರ್ : ಯಾಕೋ ವಾಸು, ಮಾರ್ಕ್ಸ್ ರ್ಕಾಡಿನಲ್ಲಿ ನಂಬರ್ ಗಳನ್ನೆಲ್ಲಾ ತಿದ್ದಿದ್ದೀಯ?

 ವಾಸು  : ಅವತ್ತು ನೀವೇ ಹೇಳಿದ್ರಲ್ಲಾ ಮೇಡಂ

 ಟೀಚರ್ : ನಾನು ಏನು ಹೇಳಿದ್ದೆ

 ವಾಸು :  ಅವರ ತಪ್ಪು ಅವರೇ ತಿದ್ಕೋಬೇಕೂ ಅಂತ ಅದ್ನೆ ತಿದ್ದಿಕೊಂಡೆ.

Join Our Whatsapp Group

 ವಾಸು : ಡಾಕ್ಟ್ರೇ ನನ್ನ ತಲೆ ಕೂದ್ಲಲ್ಲಾ ಉದುರಿಹೋಗ್ತಾ ಇದೆ. ಇದನ್ನು ಹೇಗೆ ಉಳಿಸಿಕೊಳ್ಳೋದು.?

 ಡಾಕ್ಟರ್ : ವೆರಿ ಸಿಂಪಲ್ ಉದುರುತ್ತಿರುವ ಕೂದಲನ್ನೆಲ್ಲಾ ಒಂದು ಬಾಕ್ಸಿನಲ್ಲಿ ಹಿಕಿಡಿ ಸುರಕ್ಷಿತವಾಗಿರುತ್ತೆ.

***

 ವಾಸು : ಲೇ ಜ್ಯೋತಿ ಹೊಸ ಆಟೋ ತಂದೆ ನೋಡು

 ಜ್ಯೋತಿ : ತುಂಬಾ ಚೆನ್ನಾಗಿದೆ

 ವಾಸು : ಇಲ್ಲಿ ನೋಡು ನಿನ್ನ ಹೆಸರು ಬರೆಸಿದೀನೆ ಗೊತ್ತಾ?

 ಜ್ಯೋತಿ : (ಹೆಸರು ನೋಡಿ ರೇಗಿ) ರೀ!ಮೊದಲು ನನ್ನ ಹೆಸರು ಅಳಿಸಿ

 ವಾಸು : ಯಾಕೆ ಹೆಸರು ಆಳುಸಬೇಕು? ಅದನ್ನ ನಿನ್ಮೇಲಿನ ಪ್ರೀತಿಗೆ ಬರಿಸಿರೋದು.

 ಜ್ಯೋತಿ : ಅಲ್ರೀ ನನ್ನ ಹೆಸರ ಕೆಳಗೆ ‘ಬಾಡಿಗೆಗೆ’ ಅಂತ ಬರೆಸಿದ್ದೀರಿ?

 ವಾಸು : ಅದ ನನಗೆ ಗೊತ್ತಾಗಲಿಲ್ಲ.